ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 72ನೇ ಪುಣ್ಯ ತಿಥಿಯಾಗಿ 10 ದಿನ ಕಳೆದಿಲ್ಲ! ಈ ಮಧ್ಯೆ ಅವರ ಪ್ರತಿಮೆಯೊಂದು ಧ್ವಂಸಗೊಂಡಿರುವ ಘಟನೆ ಜಾರ್ಖಂಡ್ನಲ್ಲಿ ವರದಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ!
Jharkhand: Mahatama Gandhi’s statue in Hazaribagh found damaged. Police say, “We are investigating to ascertain whether the statue fell itself or was vandalized. We are also checking CCTV footage and questioning some people”. pic.twitter.com/u6EHS08wCC
— ANI (@ANI) February 9, 2020
ಜಾರ್ಖಂಡ್ನ ಹಜಾರಿಬಾಗ್ ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಮೆ ಸ್ವತಃ ತಾನೇ ಬಿದ್ದಿದೆಯೋ ಅಥವಾ ಯಾರಾದರೂ ಧ್ವಂಸಗೊಳಿಸಿದ್ದಾರೋ ಎಂದು ತನಿಖೆಯನ್ನು ನಡೆಸುತ್ತಿದ್ದಾರೆ. ಇನ್ನು ಘಟನೆ ಬಗ್ಗೆ ಶಾಸಕ ಮನೀಶ್ ಜೈಸ್ವಾಲ್ ಕೂಡ ತೀವ್ರವಾಗಿ ಖಂಡಿಸಿದ್ದಾರೆ.
“ಪ್ರತಿಮೆ ತಾನಾಗಿಯೇ ಬಿದ್ದುಹೋಗಿದೆಯೇ? ಅಥವಾ ಯಾರಾದರೂ ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆಯೇ? ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ! ಹಾಗೆಯೆ ಸ್ಥಳದಲ್ಲಿರುವ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ.. ಈ ಬಗ್ಗೆ ಸ್ಥಳೀಯರಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇವೆ” ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ!
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
