fbpx
ಸಮಾಚಾರ

ಸಿನಿಮಾ ನೋಡಿ ಚಿತ್ರಮಂದಿರದಲ್ಲೆ ಪ್ರಾಣಬಿಟ್ಟ ವ್ಯಕ್ತಿ!

ಟಾಲಿವುಡ್ ಸುಂದರಿ ಸಮಂತಾ ಅಭಿನಯದ ‘ಜಾನು’ ಚಿತ್ರ ಮೊನ್ನೆ ತೆರೆಕಂಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ! ಈ ಮದ್ಯೆ ಜಾನು ಸಿನಿಮಾ ನೋಡಲು ಬಂದ ಅಭಿಮಾನಿಯೋರ್ವ ಚಿತ್ರಮಂದಿರದಲ್ಲೇ ಹೃದಯಾಘಾತಗೊಂಡು ಸಾವನಪ್ಪಿದ್ದಾನೆ.

ಹೌದು, ಹೈದರಾಬಾದ್‌ನ ಗೋಕುಲ್‌ ಚಿತ್ರಮಂದಿರದಲ್ಲಿ ಅಭಿಮಾನಿಯೊಬ್ಬ ‘ಜಾನು’ ಚಿತ್ರ ವೀಕ್ಷಿಸುತ್ತಿದ್ದನು. ಪ್ರದರ್ಶನ ಮುಗಿದ ನಂತರವೂ ಹೊರ ಬಾರದ ಕಾರಣ ಸಿಬ್ಬಂದಿ ಹತ್ತಿರ ಹೋದಾಗ ಆ ವ್ಯಕ್ತಿ ಆಗಲೇ ಕೊನೆಯುಸಿರೆಳೆದಿದ್ದರು.

ಕೂಡಲೇ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನೂ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವ್ಯಕ್ತಿಯನ್ನು ಹತ್ತಿರದ ಗಾಂಧಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೃದಯಾಘಾತವೇ ಈ ವ್ಯಕ್ತಿಯ ಸಾವಿಗೆ ಕಾರಣ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಜಾನು ಸಿನಿಮಾದಲ್ಲಿ ಸಾಕಷ್ಟು ಭಾವನಾತ್ಮಕ ಅಂಶಗಳಿವೆ. ಹೀಗಾಗಿ ಸಿನಿಮಾ ನೋಡಿ ಭಾವುಕನಾಗಿ ಆ ಪ್ರೇಕ್ಷಕನಿಗೆ ಹೃದಯಾಘಾತ ಉಂಟಾಗಿರಬಹುದು ಎಂದು ಊಹಿಸಲಾಗಿದೆ.

ಅಸಲಿಗೆ, ಆ ವ್ಯಕ್ತಿಯ ಹೆಸರೇನು.? ಕುಟಂಬಸ್ಥರು ಯಾರು.? ಎಂಬುದು ತಿಳಿದುಬಂದಿಲ್ಲ. ವ್ಯಕ್ತಿಯ ಜೇಬಿನಲ್ಲಿ ಯಾವುದೇ ರೀತಿಯ ಗುರುತು ಚೀಟಿ, ವಿಳಾಸ ಸಿಗದ ಕಾರಣ, ಮೃತಪಟ್ಟವರ ಬಗ್ಗೆ ವಿವರ ಲಭ್ಯವಾಗುವುದು ತಡವಾಗಿದೆ.
.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top