fbpx
ಸಮಾಚಾರ

ರಾಜಕೀಯ ವೈಷಮ್ಯ ಬಿಟ್ಟು ನಿಖಿಲ್​ ನಿಶ್ಚಿತಾರ್ಥ ಬಂದ ಸಿಎಂ BSY: ಧನ್ಯವಾದ ಹೇಳಿದ ಹೆಚ್​ಡಿಕೆ!

ರಾಜಕೀಯವೇ ಬೇರೆ, ಗೆಳೆತನವೇ ಬೇರೆ , ರಾಜಕೀಯದ ಆಚೆಗೆ ನಾವೆಲ್ಲಾ ಮಿತ್ರರು ಅನ್ನೋದನ್ನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೆ ನಿರೂಪಿಸಿದ್ದಾರೆ. ವಿವಿಧ ವೇದಿಕೆಗಳಲ್ಲಿ ​ರಾಜಕೀಯ ವೈರಿಗಳಂತೆ ವಾಗ್ಧಾಳಿ ನಡೆಸುವ ಬಿಎಸ್​ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿ ಕೈಕುಲುಕಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ತಾಜ್​ ವೆಸ್ಟ್​ ಎಂಡ್​ನಲ್ಲಿ ನಡೆಯುತ್ತಿರುವ ನಿಖಿಲ್​ ಕುಮಾರಸ್ವಾಮಿ ಹಾಗೂ ರೇವತಿಯವರ ನಿಶ್ಚಿತಾರ್ಥಕ್ಕೆ ಸಿಎಂ ಬಿಎಸ್​​ ಯಡಿಯೂರಪ್ಪ, ಸಚಿವ ಆರ್​.ಅಶೋಕ್​, ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಸೇರಿದಂತೆ ರಾಜ್ಯಸರ್ಕಾರದ ದೊಡ್ಡ ದಂಡೆ ಬಂದಿತ್ತು! ಈ ವೇಳೆ ನವ ವಧು-ವರರಿಗೆ ವಿಶ್​ ಮಾಡಿದ ರಾಜಕೀಯ ನಾಯಕರು ನಂತರ ಕುಮಾರಸ್ವಾಮಿ ಜೊತೆ ನಿಂತು ಒಟ್ಟಿಗೆ ಫೊಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ಕುಮಾರಸ್ವಾಮಿ ಅವರು ಬಿಎಸ್​ವೈರ ಕೈ ಹಿಡಿದು ನಿಶ್ಚಿತಾರ್ಥಕ್ಕೆ ಬಂದಿದ್ದಕ್ಕೆ ಧನ್ಯವಾದ ತಿಳಿಸಿದರು!

ಇನ್ನು, ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಸಚಿವ ಕೆಎಸ್ ಈಶ್ವರಪ್ಪ ಕೂಡಾ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದರು. ಇನ್ನೂ ಅನೇಕ ರಾಜಕೀಯ, ಸ್ಯಾಂಡಲ್ ವುಡ್ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top