ಪ್ರಶಾಂತ್ ನೀಲ್ ನಿರ್ದೇಶನದ ‘ರಾಕಿಂಗ್ ಸ್ಟಾರ್’ ಯಶ್ ನಾಯಕನಾಗಿರುವ ‘ಕೆಜಿಎಫ್ ಚಾಪ್ಟರ್ 1’ ಕನ್ನಡ ಚಿತ್ರರಂಗದಲ್ಲಿ ಹಲವು ಮೈಲಿಗಲ್ಲುಗಳಿಗೆ ನಾಂದಿ ಹಾಡಿದ ಚಿತ್ರ. ಈಗ ಕೆಜಿಎಫ್ 2 ಸಿನಿಮಾದ ಶೂಟಿಂಗ್ ಇದೀಗ ಅಂತಿಮ ಹಂತಕ್ಕೆ ಬರುತ್ತಿದ್ದು, ಸದ್ಯದ ಸುದ್ದಿ ಏನಂದರೆ, ಕೆಜಿಎಫ್ 2′ ಚಿತ್ರತಂಡಕ್ಕೆ ಮತ್ತೊಬ್ಬ ಕಲಾವಿದನ ಆಗಮನ ಆಗಿದೆ. ತೆಲುಗು ಚಿತ್ರರಂಗದ ಖ್ಯಾತ ನಟ ರಾವ್ ರಮೇಶ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Welcome on board Rao Ramesh sir.
We will leave it to the audience to keep guessing on this one, till they see you on the big screen.
Thank you for being apart of #KGFChapter2 pic.twitter.com/fWteQ5YnHm— Prashanth Neel (@prashanth_neel) February 10, 2020
ಈ ವಿಷಯವನ್ನ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ‘ಸ್ವಾಗತ ರಮೇಶ್ ಸರ್, ನೀವು ತೆರೆಮೇಲೆ ಯಾವ ಪಾತ್ರದಲ್ಲಿ ಕಾಣಿಸಿಕೊಳ್ತಿರಿ ಅನ್ನೋ ಕುತೂಹಲದಿಂದ ನಿಮ್ಮನ್ನ ನೋಡೋಕೆ ಪ್ರೇಕ್ಷಕರು ಕಾಯ್ತಿದ್ದಾರೆ. ಕೆಜಿಎಫ್-2 ಭಾಗವಾಗಿದ್ದಕ್ಕೆ ಧನ್ಯವಾದ’ ಅಂತಾ ಬರೆದಿದ್ದಾರೆ.
ರಾವ್ ರಮೇಶ್ ಸಿನಿಮಾದಲ್ಲಿ ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವ ನಿರೀಕ್ಷೆ ಪ್ರೇಕ್ಷಕರಲ್ಲಿ ಮೂಡುವುದು ಸಹಜ. ಇಂತಹ ಕುತೂಹಲವನ್ನು ಹಾಗೆಯೇ ಉಳಿಸಿರುವ ಪ್ರಶಾಂತ್ ನೀಲ್, ನೀವೆ ಊಹಿಸಿ ಎಂದು ಪ್ರೇಕ್ಷಕರಿಗೆ ಅದನ್ನು ಬಿಟ್ಟಿದ್ದಾರೆ.
ಒಟ್ಟಾರೆಯಾಗಿ ‘ಕೆಜಿಎಫ್ 2’ ಚಿತ್ರ ಹಲವು ಕಾರಣಗಳಿಂದ ಕುತೂಹಲ ಸೃಷ್ಟಿಸಿದೆ. ‘ಕೆಜಿಎಫ್ 1’ ವಿಶ್ವದಾದ್ಯಂತ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲೂ ಕೂಡ ದಾಖಲೆ ಬರೆದಿತ್ತು. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ಬಂಡವಾಳವಿದೆ. ಈ ಸಿನಿಮಾದ ಶೂಟಿಂಗ್ ಕಾರ್ಯ ಭರದಿಂದ ಸಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
