fbpx
ಸಮಾಚಾರ

ಫೆಬ್ರವರಿ 13: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಸ್ಥಳ- ಬೆಂಗಳೂರು.
ಗುರುವಾರರ, ಫೆಬ್ರವರಿ 13 2019
ಸೂರ್ಯೋದಯ : 6:43 am
ಸೂರ್ಯಾಸ್ತ: 6:24pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಮಾಘ
ಪಕ್ಷ : ಕೃಷ್ಣಪಕ್ಷ
ತಿಥಿ : ಪಂಚಮೀ 20:45
ನಕ್ಷತ್ರ: ಹಸ್ತ 09:25
ಯೋಗ: ಶೂಲ 20:03
ಕರಣ: ಕುಲವ 10:09 ತೈತುಲ 20:45

ಅಭಿಜಿತ್ ಮುಹುರ್ತ: 12:10 pm – 12:57 pm
ಅಮೃತಕಾಲ :4:00 am – 5:27 am

ರಾಹುಕಾಲ- 2:00 pm – 3:27 pm
ಯಮಗಂಡ ಕಾಲ- 6:46 am – 8:13 am
ಗುಳಿಕ ಕಾಲ- 9:40 am – 11:07 am

 

 

ಮೇಷ (Mesha)


ವೃತ್ತಿ ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಮಾಹಿತಿ ಲಭಿಸಲಿದೆ. ಉದ್ಯಮಿಗಳಿಗೆ ವ್ಯವಹಾರ ಹೆಚ್ಚಿಸಲು ಜಾಗ್ರತೆ ವಹಿಸಬೇಕಾಗುತ್ತದೆ. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಆಸಕ್ತಿ ತೋರಿ ಬರಲಿದೆ. ಸಂಚಾರದಲ್ಲಿ ಜಾಗ್ರತೆ.

ವೃಷಭ (Vrushabh)


ಆರೋಗ್ಯ ಭಾಗ್ಯ ಸುಧಾರಿಸ ಲಿದೆ. ಪ್ರಯಾಣ, ದೂರ ಸಂಚಾರದಲ್ಲಿ ಕಾರ್ಯಸಿದ್ಧಿಯಾಗಲಿದೆ. ಆರ್ಥಿಕವಾಗಿ ಮುನ್ನಡೆ ತೋರಿ ಬಂದೀತು. ವಿದ್ಯಾರ್ಥಿಗಳು ಪ್ರಯತ್ನಬಲದ ಸಾರ್ಥಕತೆಯನ್ನು ಪಡೆದಾರು.

ಮಿಥುನ (Mithuna)


ನಿರುದ್ಯೋಗಿಗಳಿಗೆ ಅವಕಾಶಗಳು ಲಭಿಸಬಹುದು. ಹೊಸ ಮಿತ್ರರ ಪರಿಚಯದಿಂದ ಕಾರ್ಯಸಾಧನೆಯಾದೀತು. ದಾಂಪತ್ಯದಲ್ಲಿ ಸಂತಾನಭಾಗ್ಯದ ಕುರುಹು ಕಾಣಿಸಲಿದೆ. ವ್ಯಾಪಾರ, ವ್ಯವಹಾರಗಳು ಲಾಭಕರ.

ಕರ್ಕ (Karka)


ಆರ್ಥಿಕವಾಗಿ ಅಡೆತಡೆಗಳು ತೋರಿ ಬಂದಾವು. ವೃತ್ತಿರಂಗದಲ್ಲಿ ಧನಾಗಮನಕ್ಕೆ ತೊಂದರೆ ಇರದು. ಮೇಲಧಿಕಾರಿಗಳಿಗೆ ಕಾರ್ಮಿಕ ವರ್ಗದವರು ಕಿರಿಕಿರಿ ತಂದಾರು. ವೃತ್ತಿರಂಗದಲ್ಲಿ ಉತ್ತಮ ನಿರ್ಧಾರ ಲಾಭಕರವು.

ಸಿಂಹ (Simha)


ಸಾಂಸಾರಿಕವಾಗಿ, ಕೌಟುಂಬಿಕವಾಗಿ ಹೊಂದಿಕೊಳ್ಳುವ ಮನೋಭಾವ ಸಮಾಧಾನಕ್ಕೆ ಕಾರಣವಾಗಲಿದೆ. ಉದ್ಯೋಗ ‌ಸ್ಥ   ರಿಗೆ ಸ್ಥಾನ ಬದಲಾವಣೆ ತಂದೀತು. ಶುಭ ಮಂಗಲ ಕಾರ್ಯಕ್ಕೆ ಅನುಕೂಲ ವಾಗಲಿದೆ.

ಕನ್ಯಾರಾಶಿ (Kanya)


ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಇದು ಸಕಾಲವಲ್ಲ. ಯೋಗ್ಯ ವಯಸ್ಕರಿಗೆ ಕಾದು ನೋಡುವ ಪರಿಸ್ಥಿತಿ ಬಂದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಿದೆ. ಸಂಚಾರದಲ್ಲಿ ಜಾಗ್ರತೆ ಇರಲಿ.

ತುಲಾ (Tula)


ಕಚೇರಿ ಕೆಲಸಕಾರ್ಯಗಳಲ್ಲಿ ಆಡೆತಡೆ ಗಳು ತೋರಿ ಬಂದರೂ ಸಮಾಧಾನ ಜಿತ್ತರಾಗಿ ಮುಂದುವರಿಯಬೇಕಾದೀತು. ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿರಿ. ಸಂಚಾರದಲ್ಲಿ ಜಾಗ್ರತೆ ವಹಿಸಿರಿ.

ವೃಶ್ಚಿಕ (Vrushchika)


ಸರಕಾರಿ ಅಧಿಕಾರಿ ವರ್ಗ ದವರಿಗೆ ಬದಲಾವಣೆ ಸಾಧ್ಯತೆ ಇರುವುದು. ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಬಗೆ ಹೊಸ ಅವಕಾಶಗಳು ದೊರಕ ಲಿವೆ. ದಾಂಪತ್ಯದಲ್ಲಿ ಮನಸ್ತಾಪ ತಂದೀತು.

ಧನು ರಾಶಿ (Dhanu)


ಆರ್ಥಿಕವಾಗಿ ಉತ್ತಮ ಚೇತರಿಕೆ. ಕೆಲಸಕಾರ್ಯಗಳಲ್ಲಿ ಅಡೆತಡೆಗಳು ತೋರಿ ಬಂದಾವು. ವ್ಯಾಪಾರ, ವ್ಯವಹಾರದಲ್ಲಿ ಪೈಪೋಟಿ ಎದುರಾದೀತು. ಹೊಸ ಚಿಂತನೆಗೆ ಸದ್ಯ ಸಕಾಲವಲ್ಲ. ದಿನಾಂತ್ಯ ಶುಭವಿದೆ.

ಮಕರ (Makara)


ನವದಂಪತಿಗಳಿಗೆ ಶುಭ ಸೂಚನೆ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ತುಸು ಹಿನ್ನಡೆ. ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಸಂಚಾರದಲ್ಲಿ ಜಾಗ್ರತೆ ವಹಿಸಬೇಕಾಗುತ್ತದೆ. ಶುಭವಿದೆ.

ಕುಂಭರಾಶಿ (Kumbha)


ಸಾಂಸಾರಿಕವಾಗಿ ಹೆಚ್ಚಿನ ಜವಾಬ್ದಾರಿ ಹೊರ ಬೇಕಾದೀತು. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಅಭಿವೃದ್ಧಿ ತೋರಿ ಬಂದರೂ ಲೆಕ್ಕಾಚಾರ ಸರಿಯಾಗಿರಲಿ. ಸ್ನೇಹಿತ ವರ್ಗದವರೊಡನೆ ಅನಾವಶ್ಯಕ ಕಲಹ ತೋರಿ ಬಂದೀತು.

ಮೀನರಾಶಿ (Meena)


ಶುಭಮಂಗಲ ಕಾರ್ಯದ ಚಿಂತನೆ ಕಾರ್ಯಗತವಾದೀತು. ಸಾಂಸಾರಿಕವಾಗಿ, ಕೌಟುಂಬಿಕವಾಗಿ ಸಮಾಧಾನದ ವಾತಾವರಣ. ಗೃಹ ನಿರ್ಮಾಣಕ್ಕೆ ಜಾಗ ಖರೀದಿಗೆ ಉತ್ತಮ ಕಾಲ. ಸದುಪಯೋಗಿಸಿಕೊಳ್ಳಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top