fbpx
ಸಮಾಚಾರ

ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ ನಲಪಾಡ್: ಹೇಳಿದ್ದೇನು ಗೊತ್ತಾ.?

ಕಳೆದ ಭಾನುವಾರದ ಸರಣಿ ಅಪಘಾತದ ಪ್ರಕರಣದಲ್ಲಿ ನಲಪಾಡ್ ಇಂದು ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆ ವಿಚಾರಣೆಗಾಗಿ ಹಾಜರಾದರು. ವಿಚಾರಣೆಯ ಬಳಿಕ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ನನ್ನನ್ನು ಗೂಂಡಾ, ಗೂಂಡಾ ಎಂದು ಕರೆಯಬೇಡಿ. ನಾನು ಈ ಹಿಂದಿನ ಪ್ರಕರಣದಿಂದಾಗಿ ಸಾಕಷ್ಟು ಬದಲಾಗಿದ್ದೇನೆ ಎಂಬುದಾಗಿ ಕಣ್ಣೀರು ಸುರಿಸಿದ್ದಾರೆ!

ಈ ಬೆಳವಣಿಗೆಯ ಹಿಂದೆ ಯಾವ ವ್ಯಕ್ತಿಗಳು ಇದ್ದಾರೆ ಎಂಬುದು ಗೊತ್ತಿದೆ. ನಾನು ನ್ಯಾಯಾಲಯದಲ್ಲಿ ಫೈಟ್ ಮಾಡುತ್ತೇನೆ! ನಾನೇನು ಗೂಂಡಾನಾ? ಮೊದಲ ಘಟನೆಯಿಂದ ನಾನು ಎಚ್ಚೆತ್ತುಕೊಂಡಿದ್ದೇನೆ, ಯಾರೋ ನನ್ನ ವಿರುದ್ಧ ಷಡ್ಯಂತ್ರ ರಚಿಸಿದ್ದಾರೆ, ನಾನು ಸಾಕಷ್ಟು ಬದಲಾಗಿದ್ದೇನೆ, ಪದೇ ಪದೇ ತಪ್ಪು ಮಾಡುವುದಿಲ್ಲ, ನನ್ನದೇನೂ ತಪ್ಪಿಲ್ಲ ನನ್ನ ಬಿಟ್ಟುಬಿಡಿ, ಒಂದೊಮ್ಮೆ ನನ್ನದೇ ತಪ್ಪು ಎಂದು ಹೇಳುವುದುದ್ದರೆ ಅದನ್ನು ಸಾಬೀತುಪಡಿಸಿ ನನ್ನ ಮೇಲೆ ದ್ವೇಷ ಯಾಕೆ?” ಎಂದು ಪ್ರಶ್ನಿಸಿದರು.

ಆಕ್ಸಿಡೆಂಟ್ ಅನ್ನೋದು ಆಕಸ್ಮಿಕ, ಯಾರೂ ಅಪಘಾತವನ್ನೇ ಮಾಡಿಲ್ವಾ? ನನ್ನ ಬಗ್ಗೆ ಯಾಕೆ ಈ ರೀತಿ ಸುದ್ದಿ ಬಿತ್ತರ ಮಾಡುತ್ತೀರಿ. ಅಪಘಾತವಾದಾಗ ನಾನು ಕೂಡ ಸ್ಥಳದಲ್ಲಿದ್ದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ಅವರ ಚಿಕಿತ್ಸೆ ವೆಚ್ಚ ಕೂಡ ಭರಿಸಿದ್ದೇನೆ, ಪರಿಹಾರ ಕೂಡ ನೀಡಿದ್ದೇನೆ! ನನ್ನನ್ನು ನಂಬಿ ಪ್ಲೀಸ್ ಎಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕೈಮುಗಿದು ಕಣ್ಣೀರು ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top