fbpx
ಸಮಾಚಾರ

ಐಪಿಎಲ್‌ 2020 ಆರಂಭಕ್ಕೂ ಮುನ್ನವೇ ಅಭಿಮಾನಿಗಳಿಗೆ ಆರ್‌ಸಿಬಿ ಸರ್‌ಪ್ರೈಸ್‌?

ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಹಲವು ಬದಲಾವಣೆ ಮಾಡಿದೆ. ತಂಡದ ಕೋಚ್, ನಿರ್ದೇಶಕ, ಆಟಗಾರರು, ಸ್ಟಾಫ್ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿದೆ. ಈ ಮದ್ಯೆ RCB ತಂಡವು ಅಭಿಮಾನಿಗಳಿಗೆ ಶಾಕ್ ನೀಡಿದೆ! ಏನದು ಅಂತೀರಾ? ಮುಂದೆ ಓದಿ!

 

 

 

ಇದೀಗ ಆರ್‌ಸಿಬಿ ತಂಡ ತನ್ನ ಹೆಸರು ಬದಲಾವಣೆಗೆ ಮತ್ತೊಂದು ಸುಳಿವನ್ನು ನೀಡಿದೆ. ಬುಧವಾರ ತನ್ನ ಅಧಿಕೃತ ಟ್ವಿಟರ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಗಳಲ್ಲಿ ಅಧಿಕೃತ ಲೋಗೊ ಮತ್ತು ಕವರ್‌ ಫೋಟೊಗಳನ್ನು ಡಿಲೀಟ್‌ ಮಾಡಿದ್ದು, ಅಭಿಮಾನಿಗಳಿಗೆ ಮತ್ತೊಂದು ಶಾಕ್‌ ನೀಡುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡುವ ಉದ್ದೇಶದಿಂದ ಆರ್‌ಸಿಬಿ ತಂಡ Royal Challengers ‘Bangalore’ ನಲ್ಲಿ Bangalore ಬದಲಿಗೆ ‘Bengaluru’ ಬಳಕೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಿದೆ ಎನ್ನಲಾಗಿದೆ. ಫೆ.16ರಿಂದ ಆರ್‌ಸಿಬಿ Royal Challengers Bengaluru ಹೆಸರಿನ ನೂತನ ಲೋಗೊ ಅನಾವರಣ ಪಡಿಸುವ ಸಾಧ್ಯತೆ ಇದೆ.

ಯಾವುದೇ ಕಾರಣವನ್ನು ನೀಡದೆ ಆರ್‌ಸಿಬಿ ಈ ರೀತಿ ನಡೆದುಕೊಂಡಿರುವುದಕ್ಕೆ ಬೇರೆ ಬೇರೆ ರೀತಿಯಲ್ಲಿ ಕಾರಣಗಳನ್ನು ಹೇಳಿತ್ತಿದ್ದಾರೆ ಆರ್‌ಸಿಬಿ ಅಭಿಮಾನಿಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top