fbpx
ಸಮಾಚಾರ

ದರ್ಶನ್ ಹುಟ್ಟುಹಬ್ಬದಂದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ದೂರು ಕೊಟ್ಟಿದ್ಯಾರು ಗೊತ್ತಾ?

ಪ್ರತಿ ವರ್ಷ ಕೂಡ ದರ್ಶನ್ ಜನ್ಮದಿನದಂದು, ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸಕ್ಕೆ ಜನಸಾಗರವೇ ಹರಿದು ಬರುತ್ತದೆ. ಅದರಂತೆ ನಿನ್ನೆ (ಫೆಬ್ರವರಿ 16) ಕೂಡ ‘ಚಕ್ರವರ್ತಿ’ಯ ಬರ್ತಡೇ ಪ್ರಯುಕ್ತ ದರ್ಶನ್ ನಿವಾಸದ ಮುಂದೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ಬಂದಿದ್ದರು! ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಸ್ಥಳೀಯರಿಗೆ ಕಿರಿಕಿರಿ ಉಂಟಾಗಿದ್ದು, ಈ ಸಂಬಂಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಎನ್‌ಸಿಆರ್‌ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.

ಅಭಿಮಾನಿಗಳ ಹಿಂಡು ಜಾಸ್ತಿಯಾಗಿ ಅಕ್ಕಪಕ್ಕದ ರಸ್ತೆಗಳಲ್ಲಿನ ಮನೆಗಳ ಮೇಲೂ ಅಭಿಮಾನಿಗಳು ಹತ್ತಿ ರಂಪಾಟ ಮಾಡಿದ್ರಂತೆ. ಐಡಿಯಲ್ ಹೋಮ್ಸ್ನ ಎಫ್ ಕ್ರಾಸ್ನಲ್ಲಿ ದರ್ಶನ್ ಮನೆಯಿದ್ದು, ಡಿ ಮತ್ತು ಇ ಕ್ರಾಸ್ ವರೆಗೆ ಜನ ಸೇರಿ ನೆರೆಹೊರೆಯವರಿಗೆ ರಾತ್ರಿ ನಿದ್ದೆಗೆಡಿಸಿದ್ರಂತೆ. ಮನೆಗಳ ಮೇಲೆ ಹತ್ತಿ ಸಿಳ್ಳೆ ಕೇಕೆ ಹಾಕಿದ ಅಭಿಮಾನಿಗಳ ನೆರೆಹೊರೆಯವರ ನಿದ್ದೆ ಕೆಡಿಸಿದ್ರಂತೆ. ಅಲ್ದೆ ರಸ್ತೆಗಳು, ಮನೆ ಮುಂಭಾಗವೆಲ್ಲ ಚಪ್ಪಲಿಗಳ ರಾಶಿ ಬಿದ್ದಿದ್ದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿತ್ತು.

 

 

ಇದೆ ವೇಳೆ ಮನೆ ಕಾಂಪೌಂಡ್ ಟೆರಸ್ ಮೇಲೆ ಹತ್ತಿದ್ದ ಡಿ ಬಾಸ್ ಪ್ಯಾನ್ಸ್ ಹೂಕುಂಡಗಳು, ಹೂ ಕಿಡಗಳನ್ನ ಸಹ ಹಾಳು ಮಾಡಿದ್ದಾರೆ ಅಂತಾರೆ ಸ್ಥಳೀಯರು. ಮನೆಗಳ ಕಾಂಪೌಂಡ್ ಮೇಲೆ ಇಟ್ಟಿದ್ದ ಗಿಡಗಳನ್ನ ಹಾಳು ಮಾಡಿದ್ದಾರೆ. ಮನೆ ಬಳಿ ನಿಲ್ಲಿಸಿದ ಕಾರುಗಳ ಮೇಲೆ ಹತ್ತಿ ಡ್ಯಾಮೇಜ್ ಮಾಡಿದ್ದು ಕಾರೊಂದು ಜಖಂಗೊಂಡಿದೆ. ಇದರಿಂದ ಬೇಸೆತ್ತ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ನಿವಾಸಿ ರಾಮಪ್ರಸಾದ್.ಎಂ.ಎಸ್ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ.

ಈ ಬಗ್ಗೆ ದೂರು ಪಡೆದ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇಲ್ಲಿನ ಜನರು ದರ್ಶನ್ ಅವರು ತಮ್ಮ ಏರಿಯಾದಲ್ಲಿ ಇರುವುದು ಖುಷಿ ಎನಿಸುತ್ತದೆ. ಅವರ ಮೇಲೆ ಅಭಿಮಾನ ಮತ್ತು ಪ್ರೀತಿ ಇದೆ. ಆದರೆ ಇಂತಹ ಸಂದರ್ಭದಲ್ಲಿ ಅವರು ಸರಿಯಾದ ವ್ಯವಸ್ಥೆ ಮಾಡಿ, ಬೇರೆಯವರಿಗೆ ತೊಂದರೆ ಕೊಡುವುದು ಸರಿಯೇ? ಎಂದು ಜನರು ಪ್ರಶ್ನಿಸಿದ್ದಾರೆ!

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜರಾಜೇಶ್ವರಿನಗರ ಠಾಣೆ ಪೊಲೀಸರು, ‘ಗಲಾಟೆ ಹಾಗೂ ಅಪರಿಚಿತರು ತೊಂದರೆ ನೀಡಿದ ಬಗ್ಗೆ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದಾರೆ. ನಿವಾಸಿಯೊಬ್ಬರ ಕಾರನ್ನು ಕೆಲವರು ಜಖಂ ಮಾಡಿದ್ದಾರೆ. ಅವರು ನೀಡಿರುವ ದೂರು ಆಧರಿಸಿ ಎನ್‌ಸಿಆರ್‌ ದಾಖಲಿಸಿಕೊಳ್ಳಲಾಗಿದೆ. ಕಾರ್ಯಕ್ರಮ ಆಯೋಜಕರು ಹಾಗೂ ಕೆಲ ಅಭಿಮಾನಿಗಳನ್ನು ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ಹೇಳಿದ್ದಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top