fbpx
ಸಮಾಚಾರ

ಕೊನೆಗೂ ಅಂತ್ಯ ಕಂಡ ಸುದೀಪ್ ‘ವಾರಸ್ದಾರ’ ವಿವಾದ

ನಟ ಕಿಚ್ಚ ಸುದೀಪ್ ಅವರಿಗೆ ಕರ್ನಾಟಕ ಹೈಕೋರ್ಟ್ ಇಂದು ಬಿಗ್ ರಿಲೀಫ್ ನೀಡಿದೆ. ನಟ, ನಿರ್ಮಾಪಕ ಸುದೀಪ್ ಅವರ ವಾರಸ್ದಾರ ಧಾರಾವಾಹಿಯ ಚಿತ್ರೀಕರಣ ವಿವಾದದ ಕುರಿತು ದಾಖಲಾಗಿದ್ದಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ. ಚಿತ್ರೀಕರಣಕ್ಕಾಗಿ ಪಡೆದ ಮನೆಯ ಮಾಲೀಕರಿಗೆ ಬಾಡಿಗೆ ಹಣ ಪಾವತಿಸದೆ ವಂಚಿಸಿದ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ಇಂದು ಹೈಕೋರ್ಟ್ ಈ ಪ್ರಕರಣ ವಜಾಗೊಳಿಸಿ ಆದೇಶಿಸ್ದ್ದು ಸುದೀಪ್ ನಿರಾಳರಾಗಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಪಟೇಲ್ ಎಂಬುವವರು ನಟ ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿ ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹಿಂದೆ ವಾರಸ್ದಾರ ಧಾರಾವಾಹಿ ತಂಡ ನಮ್ಮ ಮನೆಯಲ್ಲಿ ಶೂಟಿಂಗ್ ನಡೆಸುವ ವೇಳೆಯಲ್ಲಿ ನನಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂದು ದೀಪಕ್ ಮಯೂರ್ ಪಟೇಲ್ ಆರೋಪಿಸಿದ್ದರು.

ಈ ಸಂಬಂಧ ಚಿಕ್ಕಮಗಳೂರು 2ನೇ ಜಿಲ್ಲಾ ಸತ್ರ ನ್ಯಾಯಾಲಯ ಸುದೀಪ್​ಗೆ ವಾರೆಂಟ್ ಜಾರಿ ಮಾಡಿತ್ತು. ಸುದೀಪ್ ಈ ಕುರಿತ ಮೂರೂ ವಾರೆಂಟ್​ಗಳಿಗೂ ಉತ್ತರಿಸಿರಲಿಲ್ಲ. ಸುದೀಪ್ ಪರ ವಕೀಲ ಪ್ರಕರಣವನ್ನು ಹೈಕೋರ್ಟ್​ಗೆ ತೆಗೆದುಕೊಂಡು ಹೋಗಿದ್ದರು. ಪ್ರಕರಣ ಕೈಗೆತ್ತುಕೊಂಡ ಕೋರ್ಟ್ ಸುದೀಪ್​​ ಅವರ ವಿರುದ್ಧದ ಕೇಸನ್ನು ಖುಲಾಸೆ ಮಾಡಿದ್ದು, ಸುದೀಪ್​​ಗೆ ರಿಲೀಫ್ ಸಿಕ್ಕಿದೆ.

ಇದೀಗ ಈ ವಿವಾದ ಅಂತ್ಯವಾಗಿದ್ದು, ನಟ ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್ಸ್​ ಮೇಲಿನ ಕೇಸ್ ವಜಾ ಆಗಿದೆ. ಈ ಪ್ರಕರಣವನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ತೋಟದ ಮಾಲೀಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ಸುದೀಪ್ ಪರ ವಕೀಲ ಗೋಪಿನಾಥ್ ಹೇಳಿಕೆ ನೀಡಿದ್ದಾರೆ.

ಪಟೇಲ್ ತಮ್ಮ ಬೇರೆ ಬೇರೆ ವ್ಯವಹಾರದಲ್ಲಿ ಆಗಿರುವ ನಷ್ಟವನ್ನು ಸುದೀಪ್​ ಮೇಲೆ ಆರೋಪ ಮಾಡುವ ಮೂಲಕ ತುಂಬಿಕೊಳ್ಳಲು ಮಯೂರ್ ನಿರ್ಧರಿಸಿದ್ದರು. ಅವರ ಕೆಟ್ಟ ಉದ್ದೇಶ ಈಡೇರದ ಹಿನ್ನೆಲೆಯಲ್ಲಿ ಕೋರ್ಟ್​ನಲ್ಲಿ ಕೇಸು ಹಾಕಿದ್ದರು. ಆದರೆ, ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಹೈಕೋರ್ಟ್​ಗೆ ಸ್ಪಷ್ಟಪಡಿಸಿದ್ದೇವೆ. ಹೀಗಾಗಿ, ಈ ಕೇಸನ್ನು ವಜಾಗೊಳಿಸಲಾಗಿದೆ ಎಂದು ವಕೀಲ ಗೋಪಿನಾಥ್ ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top