fbpx
ಸಮಾಚಾರ

ದರ್ಶನ್‌ ಅಭಿಮಾನಿಗಳಿಂದ ಪೊಲೀಸ್‌ ಪೇದೆ ಮೇಲೆ ಹಲ್ಲೆ? ಫ್ಯಾನ್ಸ್ ಮೇಲಿನ ಆರೋಪಕ್ಕೆ ದಚ್ಚು ಹೇಳಿದ್ದೇನು?

ರಾಜರಾಜೇಶ್ವರಿ ನಗರದಲ್ಲಿ ದರ್ಶನ್‌ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ರಾಜ್ಯದ ಮೂಲೆಮೂಲೆಗಳಿಂದ ಬಂದ ಫ್ಯಾನ್ಸ್‌ ಅತಿ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ನೂಕುನುಗ್ಗಲು ಆಗದಂತೆ ನಿಯಂತ್ರಿಸಲು ಹೋದ ಪೇದೆ ಮೇಲೆ ಹಲ್ಲೆ ಮಾಡಲಾಗಿದೆ!

ಕರ್ತವ್ಯ ನಿರತರಾಗಿದ್ದ ಪೊಲೀಸ್‌ ಪೇದೆ ಮೇಲೆ ‘ಚಾಲೆಂಜಿಂಗ್‌ ಸ್ಟಾರ್‌’ ಅಭಿಮಾನಿಗಳು ಹಲ್ಲೆ ಮಾಡಿದ್ದಾರೆ ಎಂಬುದಾಗಿ ಆರ್‌ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವರಾಜ್‌ ಎಂಬ ಪೊಲೀಸ್‌ ಪೇದೆ ಮೇಲೆ ದರ್ಶನ್‌ ಅಭಿಮಾನಿಗಳು ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ಬಗ್ಗೆ ದರ್ಶನ್‌ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಹೇಳಿದ್ದೇನು
ಮೈಸೂರಿನಲ್ಲಿ ನಿರ್ಮಾಪಕಿ ಶ್ರುತಿ ನಾಯ್ಡು ಅವರ ಹೊಸ ಹೋಟೆಲ್ ಓಪನಿಂಗ್ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಕೊಂಚ ಕೋಪದಿಂದಲೇ ”ಎಲ್ಲಿ ಏನು ಕೇಳಬೇಕು..” ಎಂದಿದ್ದಾರೆ. ”ಏನಾಗಿದೆ.. ನಮ್ಮ ಬಳಿಯೂ ಸಿಸಿ ಟಿವಿ ಇದೆ. ಹುಟ್ಟುಹಬ್ಬಕ್ಕೆ ಬಂದಿರುವವರು ಆ ರೀತಿ ಮಾಡಲು ಬಂದಿಲ್ಲ. ಏನಾಗಿದೆ ಇನ್ನು ಗೊತ್ತಿಲ್ಲ. ಇನ್ನು ನೋಡಬೇಕು.” ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top