fbpx
ಸಮಾಚಾರ

ನಿವೃತ್ತಿ ಬಗ್ಗೆ ಕೇಳಿದ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ ವಿರಾಟ್‌ ಕೊಹ್ಲಿ! ಇನ್ನೆಷ್ಟು ವರ್ಷ ಆಡ್ತಾರೆ ವಿರಾಟ್?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ನಿವೃತ್ತಿಯ ಬಗ್ಗೆ ತುಟಿಬಿಚ್ಚಿದ್ದಾರೆ. ದಾಖಲೆ ಮೇಲೆ ದಾಖಲೆ ಬರೆಯುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ನಿವೃತ್ತಿಯ ಕುರಿತಂತೆ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನ್ಯೂಜಿಲೆಂಡ್‌ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಶುಕ್ರವಾರ ಶುರುವಾಗಲಿದ್ದು, ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್‌ ಬಿಡುವಿಲ್ಲದ ಕ್ರಿಕೆಟ್‌ ಮತ್ತು ದಣಿವಿನ ನಿರ್ವಹಣೆ ಸಲುವಾಗಿ ಯಾವುದಾದರು ಒಂದು ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಆಲೋಚನೆ ಬರಬಹುದು ಎಂದಿದ್ದಾರೆ.

“ಇದನ್ನು ಮುಚ್ಚಿಡಲು ಸಾಧ್ಯವಿಲ್ಲ. ಕಳೆದ 8 ವರ್ಷಗಳಿಂದ ಪ್ರತಿ ವರ್ಷ 300 ದಿನಗಳ ಕಾಲ ನಾನು ಕ್ರಿಕೆಟ್‌ ಆಡುತ್ತಿದ್ದೇನೆ. ಇದರಲ್ಲಿ ಪ್ರಯಾಣ ಮತ್ತು ಅಭ್ಯಾಸ ಕೂಡ ಸೇರಿದೆ. ಜೊತೆಗೆ ಎಲ್ಲೆಡೆ ನನ್ನ ಪ್ರಯತ್ನ ಶೇ. 100ರಷ್ಟಿರುತ್ತದೆ. ಇದರಿಂದ ದಣಿವಾಗುವುದು ಸಹಜ,” ಎಂದು ಹೇಳಿದ್ದಾರೆ.

ಈ ವೇಳೆ 31 ವರ್ಷದ ಕೊಹ್ಲಿ, ಮೂರು ಸ್ವರೂಪಗಳಲ್ಲಿ 3 ವರ್ಷ ಸಮರ್ಥವಾಗಿ ಆಡಲು ನನ್ನನ್ನು ನಾನು ಸಿದ್ಧಪಡಿಸಿಕೊಂಡಿದ್ದೇನೆ. ಜೊತೆಗೆ 3 ವರ್ಷದ ಬಳಿಕ ನನ್ನ ಮೇಲಿನ ಜವಾಬ್ದಾರಿಗಳಲ್ಲಿ ಒಂದನ್ನು ಕೈಬಿಡಲು ಯೋಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಕೆಲಸದ ಹೊರೆಯಿಂದಾಗಿ ಆಟಗಾರರು ಹೆಚ್ಚಿನ ಬ್ರೇಕ್‍ಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲ ಕಾಲಕ್ಕೂ ನಮ್ಮ ದೈಹಿಕ ಸಾಮಥ್ರ್ಯವು ಒಂದೇ ರೀತಿ ಇರುವುದಿಲ್ಲ. 34 ಅಥವಾ 35ನೇ ವಯಸ್ಸಿನಲ್ಲಿ ವಿಶ್ರಾಂತಿ ಬೇಕೆಂದು ಎನಿಸಬಹುದು. ಆದಾಗ್ಯೂ ಮುಂದಿನ 2 ಅಥವಾ 3 ವರ್ಷಗಳವರೆಗೆ ನಾನು ಈ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top