fbpx
ಸಮಾಚಾರ

ಎರಡನೇ ಮಗುವಿಗೆ ತಾಯಿಯಾದ ನಟಿ ಶಿಲ್ಪಾ ಶೆಟ್ಟಿ: ಕುಂದ್ರಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ!

ಖ್ಯಾತ ಬಾಲಿವುಡ್ ತಾರೆ, ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ತಿ ಹಾಗೂ ರಾಜ್ ಕುಂದ್ರಾ ದಂಪತಿಗಳು ತಮ್ಮ ಮನೆಗೆ ನೂತನ ಅತಿಥಿಯನ್ನು ಸ್ವಾಗತಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಜನ್ಮಿಸಿದ ಹೆಣ್ಣು ಮಗುವಿಗೆ ತಾವು ಪೋಷಕರಾಗಿದ್ದೇವೆ ಎಂದು ನಟ ಶಿಲ್ಪಾ ಶೆಟ್ಟಿಕುಂದ್ರಾ ದಂಪತಿಗಳು ಶುಕ್ರವಾರ ಪ್ರಕಟಿಸಿದ್ದಾರೆ. ಫೆಬ್ರವರಿ 15 ರಂದು ಈ ದಂಪತಿಗಳು ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು.

 

 

View this post on Instagram

 

|| Om Shri Ganeshaya Namah || Our prayers have been answered with a miracle… With gratitude in our hearts, we are thrilled to announce the arrival of our little Angel, Born: February 15, 2020 Junior SSK in the house ‘Sa’ in Sanskrit is “to have”, and ‘Misha’ in Russian stands for “someone like God”. You personify this name – our Goddess Laxmi, and complete our family. ⠀⠀⠀⠀⠀⠀⠀⠀⠀ ⠀⠀⠀⠀⠀⠀⠀⠀⠀ ⠀⠀⠀⠀⠀⠀ ~ Please bestow our angel with all your love and blessings❤ ~ Ecstatic parents: Raj and Shilpa Shetty Kundra Overjoyed brother: Viaan-Raj Kundra . . . . . . . . . #SamishaShettyKundra #gratitude #blessed #MahaShivratri #daughter #family #love

A post shared by Shilpa Shetty Kundra (@theshilpashetty) on

 

ನಮ್ಮ ಕುಂಟುಂಬಕ್ಕೆ ಸಮಿಶಾ ಶೆಟ್ಟಿ ಕುಂದ್ರ ಹೊಸ ಸದಸ್ಯೆಯಾಗಿ ಮನೆ ತುಂಬಿದ್ದಾರೆ. ಈ ಸಂತಸವನ್ನು ವ್ಯಕ್ತಪಡಿಸಲು ನನಗೆ ಆಗುತ್ತಿಲ್ಲ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿಇನ್‍ಸ್ಟಾಗ್ರಾಂನಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, ಓಂ ಶ್ರೀ ಗಣೇಶಯಾ ನಮಃ. ನಮ್ಮ ಪ್ರಾರ್ಥನೆ ದೇವರಿಗೆ ತಲುಪಿದ್ದು, ಮನೆಗೆ ಆಗಮಿಸಿರುವ ಪುಟ್ಟ ದೇವತೆ ಶಮಿಶಾ ಶೆಟ್ಟಿಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ.

ಜೂನಿಯರ್ ಶಿಲ್ಪಾ ಶೆಟ್ಟಿ ಕುಂದ್ರಾ ಫೆಬ್ರವರಿ 15ರಂದು ಜನಿಸಿದ್ದಾಳೆ.  ಅಂದ್ರೆ ಸಂಸ್ಕøತದಲ್ಲಿ ನಮ್ಮವಳು ಮತ್ತು ಮಿಶಾದ ಅಂದ್ರೆ ದೇವರ ರೀತಿಯಲ್ಲಿರುವ ಎಂದರ್ಥ. ಹಾಗಾಗಿ ನಮ್ಮ ಮನೆಗೆ ಆಗಮಿಸಿರುವ ಲಕ್ಷ್ಮಿಗೆ ಸಮಿಶಾ ಎಂದು ಹೆಸರಿಟ್ಟಿದ್ದೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮಕ್ಕಳ ಮೇಲಿರಲಿ. ವಿಯಾನ್ ರಾಜ್ ಕುಂದ್ರಾ ಜೊತೆ ಆಡಲು ಪುಟ್ಟ ಸೋದರಿ ಆಗಮಿಸಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top