fbpx
ಸಮಾಚಾರ

‘ವಿಂಗ್ ಕಮಾಂಡರ್ ಅಭಿನಂದನ್’ ಪಾತ್ರದಲ್ಲಿ ದರ್ಶನ್: ನಿರ್ಮಾಪಕ ಮುನಿರತ್ನ ಅನೌನ್ಸ್

zತನ್ನ ನಿರ್ಮಾಣದ ಮುಂದಿನ ಚಿತ್ರದಲ್ಲಿ ನಟ ದರ್ಶನ್ ತೂಗುದೀಪ ಅವರು ವಿಂಗ್ ಕಮಾಂಡರ್ ಪಾತ್ರ ಮಾಡಲಿದ್ದಾರೆ ಎಂದು ರಾಜರಾಜೇಶ್ವರಿ ಕ್ಷೇತ್ರದ ಅನರ್ಹ ಶಾಸಕ, ಚಿತ್ರ ನಿರ್ಮಾಪಕ ಮುನಿರತ್ನ ಘೋಷಿಸಿದ್ದಾರೆ!

ಕುರುಕ್ಷೇತ್ರ ಶತ ದಿನ ಪೂರೈಸಿದ ಖುಷಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುನಿರತ್ನ, “ನನಗೆ ದರ್ಶನ್ ಅವರನ್ನ ವಾರ್ ಫಿಲ್ಮ್​ನಲ್ಲಿ ನೋಡಬೇಕು ಅನ್ನೋ ಆಸೆ ಇತ್ತು. ಅದರಂತೆ ದರ್ಶನ್ ಅವರೊಂದಿಗೆ ’ವಿಂಗ್ ಕಮಾಂಡರ್ ಅಭಿನಂದನ್’ ಚಿತ್ರವನ್ನ ಇದೇ ವರ್ಷ ನಿರ್ಮಾಣ ಮಾಡ್ತೀನಿ” ಅಂತಾ ಘೋಷಣೆ ಮಾಡಿದ್ದಾರೆ.

ದರ್ಶನ್ ಅವರಲ್ಲಿ ಈಗ ತಾನೇ ಮಾತನಾಡಿದ್ದೇನೆ. ಪೌರಾಣಿಕ, ಸಾಮಾಜಿಕ ಸೇರಿದಂತೆ ಅವರು ಎಲ್ಲ ತರಹದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಅವರನ್ನೊಬ್ಬ ಸೈನಿಕನನ್ನಾಗಿ ನೋಡಬೇಕೆಂಬ ಆಸೆ ಇದೆ. ಕಳೆದ ವರ್ಷ ಪುಲ್ವಾಮ ದಾಳಿಯ ಬಳಿಕ ಸರ್ಜಿಕಲ್ ಸ್ಟ್ರೈಕ್ ವೇಳೆ ನೆರೆಯ ದೇಶಕ್ಕೆ ತೆರಳಿ ಸೆರೆ ಸಿಕ್ಕ ಬಳಿಕ ಭಾರತಕ್ಕೆ ಮರಳಿದ ಧೀರ ಸೈನಿಕ ಅಭಿನಂದನ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಈ ವೇಳೆ ವೇದಿಕೆ ಮೇಲೆ ಮಾತನಾಡುತ್ತಿದ್ದ ನಟ ಅಭಿಷೇಕ್, ಮುನಿರತ್ನ ಅವರು ಎಲ್ಲರಿಗೂ ಚ್ಯಾನ್ಸ್ ಕೊಟ್ಟದ್ದಾರೆ ನನಗೆ ಇನ್ನು ಚ್ಯಾನ್ಸ್ ಕೊಟಿಲ್ಲ. ನನ್ನ ಅಪ್ಪ, ಅಮ್ಮ ಇಬ್ಬರಿಗೂ ದರ್ಶನ್ ಜೊತೆ ಅಭಿನಯಿಸಲು ಅವಕಾಶ ಕೊಟ್ರಿ. ಆದ್ರೆ ನನ್ನ ಯಾಕೆ ಬಿಟ್ರಿ ಎಂದು ಮುನಿರತ್ನರನ್ನ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುನಿರತ್ನ, ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್‍ನ ಮೇಜರ್ ಅಭಿನಂದನ್ ಮಾಡುತ್ತೇನೆ. ಆ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್‍ಗೂ ಅವಕಾಶ ಕೊಡುತ್ತೇನೆ ಎಂದು ಸಿನಿಮಾ ಬಗ್ಗೆ ಅನೌನ್ಸ್ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top