fbpx
ಸಮಾಚಾರ

ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಕೋಟಿಗೊಬ್ಬ-3 ಟೀಸರ್ ನಂಬರ್ ಓನ್!

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ – 3 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರವಿಶಂಕರ್ ಧ್ವನಿಯ ಖದರ್ ನಲ್ಲಿ ಮೂಡಿ ಬಂದಿರುವ ಟೀಸರ್ ನಲ್ಲಿ ಸುದೀಪ್ ಆ್ಯಕ್ಷನ್ ಝಲಕ್ ಪ್ರೇಕ್ಷಕರನ್ನು ಮೋಡಿ ಮಾಡುವಂತೆ ಇದೆ. ಶಿವರಾತ್ರಿ ಹಬ್ಬದ ಶುಭ ಸಂದರ್ಭದಂದು ರಿಲೀಸ್ ಆದ ‘ಕೋಟಿಗೊಬ್ಬ-3’ ಚಿತ್ರದ ಟೀಸರ್ ಅಕ್ಷರಶಃ ಧೂಳೆಬ್ಬಿಸಿದೆ. ಸದ್ಯ ಯೂಟ್ಯೂಬ್ ನಲ್ಲಿ ಈಗಲೂ ‘ಕೋಟಿಗೊಬ್ಬ-3’ ಚಿತ್ರದ ಟೀಸರ್ ನಂಬರ್ 1 ಟ್ರೆಂಡಿಂಗ್ ನಲ್ಲಿದೆ.

 

 

ಆರಂಭದಲ್ಲಿಯೇ ನಟ ರವಿಶಂಕರ್ ಪೊಲೀಸರ ಮುಂದೆ, ಸರ್ ಇಬ್ಬರ ಅಲ್ಲ ಅವನು ಒಬ್ಬನೇ ಎಂದು ಕಿಚ್ಚ ಸುದೀಪ್ ಪಾತ್ರವನ್ನ ವಿಶ್ಲೇಷಣೆ ಮಾಡ್ತಾ ಹೋಗ್ತಾರೆ. ಲೋಕಲ್ ನಲ್ಲಿ ಹೊಡೆದಾಗಲೇ ಹೇಳಿದ್ರೆ ಯಾರು ಕೇಳಲಿಲ್ಲ. ಈಗ ಅವನು ಇಂಟರ್ ನ್ಯಾಷನಲ್ ಕಿಲಾಡಿ. ಅವನ ಟ್ರಿಕ್ಸ್ ನನಗೆ ಗೊತ್ತು. ನೀವು ಅವನನ್ನ ಬಿಟ್ಟರೆ ಮುಂದೆ ಯಾರು ಹಿಡಿಯೋದಕ್ಕೆ ಸಾಧ್ಯನೇ ಇಲ್ಲ ಎಂದು ಹೇಳುವ ದೃಶ್ಯಗಳನ್ನು ಟೀಸರ್ ನಲ್ಲಿ ನೋಡಬಹುದಾಗಿದೆ.

ಕಿಚ್ಚನ ಮಾಸ್ ಲುಕ್ ನೋಡುಗರನ್ನ ಸೆಳೆಯುತ್ತಿದೆ. ಟೀಸರ್ ನಲ್ಲಿ ಕಿಚ್ಚನ್ ಡೈಲಾಗ್ ಇಲ್ಲದಿದ್ದರೂ, ಫೈಟಿಂಗ್ ದೃಶ್ಯಗಳು ಮಾಸ್ ಆಡಿಯನ್ಸ್ ಸೆಳೆಯುವಲ್ಲಿ ಯಶಸ್ವಿಯಾಗುತ್ತೆ ಎಂಬ ಭರವಸೆಯನ್ನು ಮೂಡಿಸಿದೆ.

ಅಂದಹಾಗೆ ಶಿವಕಾರ್ತಿಕ್ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ನಿರ್ಮಾಪಕ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ. ಕೋಟಿಗೊಬ್ಬ ಸರಣಿಯ 3ನೇ ಆವೃತ್ತಿ ಇದಾಗಿದ್ದು ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಅಂದ್ಹಾಗೆ ಚಿತ್ರದಲ್ಲಿ ಸುದೀಪ್ ಗೆ ಜೋಡಿಯಾಗಿ ಮಲಯಾಳಂ ಬೆಡಗಿ ಮಡೋನಾ ಸೆಬಾಸ್ಟಿನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top