fbpx
ಸಮಾಚಾರ

ಅಮ್ಮನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ ನಿಖಿಲ್!

ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ಪೋಸ್ಟ್ ಮಾಡಿ ಶುಭಶಯ ಕೋರಿದ್ದಾರೆ. ನಿನ್ನ ತ್ಯಾಗ ಅಪಾರ, ಎಂದೆಂದಿಗೂ ಹೀಗೆ ನಗುತ್ತಿರು ಎಂದು ಪ್ರೀತಿಯಿಂದ ವಿಶ್ ಮಾಡಿದ್ದಾರೆ.

 

 

‘ಹುಟ್ಟುಹಬ್ಬದ ಶುಭಾಷಯಗಳು ಅಮ್ಮ… ನನಗೆ ಜನ್ಮ ಕೊಟ್ಟಾಗಿನಿಂದ ನೀನು ಮಾಡಿರುವ ತ್ಯಾಗ ಅಪಾರ. ನನ್ನ ಇಡೀ ಜೀವನ ನಿನ್ನ ಋಣದಲ್ಲಿದೆ. ನಿನ್ನ ನಗು ಮುಖ ನೋಡಿದರೆ ಸಾಕು ನನ್ನ ಮುಖದಲ್ಲಿ ನಗು ಮೂಡುತ್ತದೆ. ನೀನು ನಕ್ಕಾಗ ಸುಂದರವಾಗಿ ಕಾಣುತ್ತೀಯಾ’ ಎಂದು ನಿಖಿಲ್​ ಬರೆದುಕೊಂಡಿದ್ದಾರೆ.

ನಿಖಿಲ್​ ಹಾಗೂ ರೇವತಿಯ ನಿಶ್ಚಿತಾರ್ಥದಲ್ಲಿ ತೆಗೆದ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ನಿಖಿಲ್​ಗೆ ಅಮ್ಮನ ಬಗ್ಗೆ ಎಷ್ಟು ಪ್ರೀತಿ ಇದೆ ಎನ್ನುವುದಕ್ಕೆ ಅವರ ಇನ್​ಸ್ಟಾಗ್ರಾಂ ಪೋಸ್ಟ್​ಗಳನ್ನು ನೋಡಿದರೆ ಹೇಳಬಹುದು. ಈ ಹಿಂದೆಯೂ ನಿಖಿಲ್​ ಅಮ್ಮನೊಂದಿಗೆ ವಿದೇಶದ ಪ್ರವಾಸದಲ್ಲಿದ್ದಾಗ ತೆಗೆಸಿಕೊಂಡ ಚಿತ್ರಗಳನ್ನು ಹಂಚಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top