fbpx
ಸಮಾಚಾರ

‘ಲವ್ ಯು ಪಾಕ್ ಆರ್ಮಿ’ ಎಂದು ಪೋಸ್ಟ್ ಹಾಕಿ ಪೊಲೀಸ್ ಅತಿಥಿಯಾದ ಯುವಕ

ಬೆಂಗಳೂರು, ಹುಬ್ಬಳ್ಳಿಯಲ್ಲಿ ಪಾಕ್‌ ಪರ ಘೋಷಣೆ ಬೆನ್ನಲ್ಲೇ ವಿಜಯಪುರದಲ್ಲಿ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಯುವಕನೊಬ್ಬ ‘ಲವ್ ಯೂ ಪಾಕ್ ಆರ್ಮಿ’ ಎನ್ನುವ ಫೇಸ್ಬುಕ್ ಪೋಸ್ಟ್ ಹಾಕಿರುವುದು ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಪಾಕ್‌ ಸೇನೆಯ ಪರವಾಗಿ ಫೋಸ್ಟ್‌ ಶೇರ್‌ ಮಾಡಿದ ತಾಳಿಕೋಟೆ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.

 

 

ಫೆಬ್ರವರಿ 22 ರಂದು A-2-Z ಖಾತೆಯಲ್ಲಿ ‘ಲವ್ ಯೂ ಪಾಕ್ ಆರ್ಮಿ’ ಎಂದು ಬರೆದ ಪೋಸ್ಟ ಹಾಕಲಾಗಿತ್ತು. ಈ ಪೋಸ್ಟನ್ನು ತಾಳಿಕೋಟಿಯ ಮೇರು ಬ್ಯಾಗವಾಟ್ ತನ್ನ ಖಾತೆಯಿಂದ ಹಂಚಿಕೊಂಡಿದ್ದ. ಫೇಸ್ ಬುಕ್ ನಲ್ಲಿ A-2 -Z ಹೆಸರಿನ ಅಕೌಂಟನಲ್ಲಿ ಬರೆಯಲಾಗಿದ್ದ “ಲವ್ ಯೂ ಪಾಕ್ ಆರ್ಮಿ” ಎನ್ನುವ ಪೋಸ್ಟ್ ನ್ನು ಜಿಲ್ಲೆಯ ತಾಳಿಕೋಟೆ ಪಟ್ಟಣ ನಿವಾಸಿ ಮೆರು ಬ್ಯಾಗವಾಟ್ ಯುವಕ ಶೇರ ಮಾಡಿದ್ದ. ಪಾಕ್ ಆರ್ಮಿ ಪರ ತಾಳಿಕೋಟಿ ಯುವಕ ಶೇರ್ ಮಾಡಿದ್ದ ಬರಹ ಫೇಸ್ಬುಕ್ ನಲ್ಲಿ ವೈರಲ್ ಆಗಿತ್ತು.

ಈ ಕುರಿತು ಮಾತನಾಡಿದ ತಾಳಿಕೋಟೆ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್, ‘ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಆತ ತಾಳಿಕೋಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಾನೆ’ ಎಂದು ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top