fbpx
ಸಮಾಚಾರ

ಕಿರಿಕ್​ ಪಾರ್ಟಿ-2 ಸಿನಿಮಾ ಮಾಡುವುದಾಗಿ ಘೋಷಿಸಿದ ರಕ್ಷಿತ್​ ಶೆಟ್ಟಿ

ಬ್ಲಾಕ್​ಬಸ್ಟರ್​ ಹಿಟ್​ ‘ಕಿರಿಕ್​ ಪಾರ್ಟಿ’ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ದಾಖಲೆಗಳನ್ನು ಬರೆದ ಸಿನಿಮಾ. ಕಿರಿಕ್​ ಪಾರ್ಟಿ ಚಿತ್ರ ಹಿಟ್​ ಆದ ಬೆನ್ನಲ್ಲೇ ಕಿರಿಕ್​ ಪಾರ್ಟಿ ಪಾರ್ಟ್​ 2 ಮಾಡ್ತಾರಾ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೆ ಚಿತ್ರತಂಡ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಖುದ್ದು ರಕ್ಷಿತ್ ಅವರೇ ಟ್ವೀಟ್​ ಮಾಡಿದ್ದು ಕಿರಿಕ್​ ಪಾರ್ಟಿ ಪಾರ್ಟ್​ 2 ಮಾಡುವುದಾಗಿ ಹೇಳಿಕೊಂಡಿದ್ದಾರೆ!

 

 

ಈ ಬಗ್ಗೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ಇದುವರೆಗೂ ನನಗೆ ಕಿರಿಕ್ ಪಾರ್ಟಿ-2 ಮಾಡುವ ಯಾವುದೆ ಪ್ಲಾನ್ ಇರಲಿಲ್ಲ. ಆದರೀಗ ಅದಕ್ಕೆ ಉತ್ತಮ ಕಥಾವಸ್ತು ಸಿಕ್ಕಿದೆ. ಕಿರಿಕ್ ಪಾರ್ಟ್ ಮತ್ತೆ ತೆರೆಮೇಲೆ ಬರುತ್ತಿದ್ದು ಉತ್ತಮ ಫೈಟ್ ಇರಲಿದೆ” ಎಂದು ಬರೆದುಕೊಂಡಿದ್ದಾರೆ. ರಕ್ಷಿತ್ ಟ್ವೀಟ್ ಮಾಡುತ್ತಿದಂತೆ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ರಕ್ಷಿತ್ ಮಾತಿಗೆ “ಸೂಪರ್ ಮಗ” ಎಂದು ಹೇಳಿದ್ದಾರೆ.

 

 

ಇನ್ನು ಅವನೇ ಶ್ರೀಮನ್ನಾರಾಯಣ ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರೋ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೈಯ್ಯಲ್ಲಿ ಸದ್ಯ ಚಾರ್ಲಿ777, ತೆನಾಲಿ, ಪುಣ್ಯಕೋಟಿ ಹಾಗೂ ಥಗ್ಸ್​ ಆಫ್ ಮಾಲ್ಗುಡಿ ಸಿನಿಮಾಗಳಿವೆ. ಈ ಎಲ್ಲಾ ಸಿನಿಮಾಗಳು ಪ್ರೇಕ್ಷಕ ವಲಯದಲ್ಲಿ ಭಾರಿ ನಿರೀಕ್ಷೆ ಮೂಡಿಸಿವೆ. ಇದರ ನಡುವೆ ಕಿರಿಕ್ ಪಾರ್ಟಿ-2 ಯಾವಾಗ ರೆಡಿಯಾಗುತ್ತೆ ಎಂಬುದನ್ನು ಕಾಡು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top