fbpx
ಸಮಾಚಾರ

ಕುತೂಹಲಕ್ಕೆ ಕಾರಣವಾಯಿತು ದೆಹಲಿ ಹಿಂಸಾಚಾರ ಬಗ್ಗೆ ನಟ ಡಾಲಿ ಧನಂಜಯ್ ಮಾಡಿದ ಟ್ವೀಟ್

ನಟ ಧನಂಜಯ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ, ತಮ್ಮ ಸಿನಿಮಾ ಅಪ್‍ಡೇಟ್ಸ್ ಗಳ ಜೊತೆಗೆ ಸಾಮಾಜಿಕ ಪಲ್ಲಟಗಳ ಕುರಿತು ಸಹ ಆಗಾಗ ಧ್ವನಿ ಎತ್ತುತ್ತಲೇ ಇರುತ್ತಾರೆ. ಅಲ್ಲದೆ ಅವರು ಕವನಗಳನ್ನು ಚೆನ್ನಾಗಿ ಬರೆಯುತ್ತಾರೆ ಎನ್ನುವುದಕ್ಕೆ ಸಂದರ್ಶನಗಳಲ್ಲಿ ಆಗಾಗ ಕವನಗಳನ್ನು ಹೇಳುವುದೇ ಸಾಕ್ಷಿ. ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ದೆಹಲಿ ದಳ್ಳುರಿ ಕುರಿತು ತಮ್ಮ ನಾಲ್ಕು ಸಾಲಿನ ಕವನದ ಮೂಲಕವೇ ಅಭಿಪ್ರಾಯ ತಿಳಿಸಿದ್ದಾರೆ.

 

 

‘ಸೂರ್ಯಕಾಂತಿಯ ನೋಡಿ ಕಲಿಯಿರಿ ಎಂದೆ ಧರ್ಮದತ್ತ ವಾಲಿದರು!. ಹೊಳೆಯ ನಿಶ್ಯಬ್ಧತೆಯೆಡೆಗೆ ನಡೆಯಿರಿ ಎಂದೆ ಗುಂಡಿನ ಶಬ್ಧಕ್ಕೆ ಮಾರುಹೋದರು!. ಸೂರ್ಯ ಮುಳುಗುತ್ತಿದ್ದಾನೆ!. ಹೊಳೆ ಹೆಪ್ಪುಗಟ್ಟುತ್ತಿದೆ! ಎಂದು ಅರ್ಥಗರ್ಭಿತ ಸಾಲುಗಳು ಟ್ವೀಟ್​​ ಮಾಡುವ ಮೂಲಕ ಧನಂಜಯ್ ತಮ್ಮ ಅಭಿಪ್ರಾಯವನ್ನು ಕವನದ ಮೂಲಕ ಹೇಳಿದ್ದಾರೆ.

ಅಂದಹಾಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಪರ-ವಿರೋಧ ಬಣದಿಂದ ಈಶಾನ್ಯ ದೆಹಲಿಯಲ್ಲಿ ಉಂಟಾದ ಗಲಭೆಯು ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೂ 23 ಮಂದಿಯನ್ನು ಬಲಿ ಪಡೆದುಕೊಂಡಿದೆ. ಪರಿಸ್ಥಿತಿ ಇನ್ನು ತಿಳಿಗೊಳ್ಳದೆ ಇರುವುದರಿಂದ ಶಾಂತಿ ಕಾಪಾಡಲು ಅನೇಕರು ಮನವಿ ಮಾಡುತ್ತಿದ್ದಾರೆ. ಹಿಂಸಾಚಾರವನ್ನು ಖಂಡಿಸಿ ರಾಷ್ಟ್ರಾದ್ಯಂತ ಅನೇಕರು ದನಿ ಎತ್ತಿದ್ದಾರೆ. ಈ ಮದ್ಯೆ ಧನಂಜಯ್​ ಟ್ವೀಟ್​ ಮಾಡಿರುವುದು ಸಾಕಷ್ಟು ಕುತೂಹಲಕ್ಕೀಡು ಮಾಡಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top