fbpx
ಸಮಾಚಾರ

ಚಂದನವನಕ್ಕೂ ಆವರಿಸಿದ ಕೊರೋನಾ ಭೀತಿ! ದರ್ಶನ್ ಸಿನಿಮಾಗೆ ಸಮಸ್ಯೆ ತಂದಿಟ್ಟ ಕೊರೊನಾ ವೈರಸ್

ಜಗತ್ತಿನ ನಾನಾ ಕಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ಇದೀಗ ಸ್ಯಾಂಡಲ್ ವುಡ್ ಗೆ ಸಹ ಆತಂಕ ಮೂಡಿಸಿದೆ. ಇದೀಗ ಕರ್ನಾಟಕದಲ್ಲಿ ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನದ ‘ರಾಬರ್ಟ್’ ಸಿನಿಮಾಗೂ ಕೊರೊನಾ ವೈರಸ್ ಭೀತಿ ಉಂಟಾಗಿದೆ.

ರಾಬರ್ಟ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿ ಮುಗಿದಿಲ್ಲ. ಕೆಲದಿನಗಳ ಹಿಂದೆ ಈ ತಂಡ ವಾರಣಾಸಿಗೆ ಹೋಗಿ ಶೂಟಿಂಗ್ ಮಾಡಿಕೊಂಡು ಬಂದಿತ್ತು. ಇನ್ನು ಕೆಲ ಹಾಡುಗಳ ಚಿತ್ರೀಕರಣ ಬಾಕಿಯಿದ್ದು, ವಿದೇಶಗಳಿಗೆ ಹೋಗಬೇಕಾಗಿತ್ತು. ಆದರೆ ವಿದೇಶದಲ್ಲಿ ಕೊರೊನಾ ವೈರಸ್, ತನ್ನ ಪ್ರತಾಪವನ್ನು ತೋರಿಸುತ್ತಿರೋದರಿಂದ ರಾಬರ್ಟ್ ಸಿನಿಮಾ ತಂಡ ಸುಮ್ಮನಿರುವಂತಾಗಿದೆ. ಸ್ಪೇನ್‌ನಲ್ಲಿ ಈ ಚಿತ್ರದ ಹಾಡುಗಳ ಶೂಟಿಂಗ್ ನಡೆಯಬೇಕಾಗಿತ್ತು.ಆದರೆ ಇದೀಗ ಯುರೋಪಿನಲ್ಲಿ ಕೊರೋನಾ ವೈರಸ್ ಭೀತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಶೂಟಿಂಗ್ ಕ್ಯಾನ್ಸಲ್ ಮಾಡುವ ತೀರ್ಮಾನಕ್ಕೆ ಬರಲಾಗಿದೆ.

ಈಗಾಗಲೇ ವಿದೇಶಕ್ಕೆ ತೆರಳಿದ್ದ ನಿರ್ದೇಶಕ ತರುಣ್ ಸುಧೀರ್ ಮತ್ತು ತಂಡ ಸದ್ಯ ಚಿತ್ರೀಕರಣ ರದ್ದುಗೊಳಿಸಿ ಹಿಂತಿರುಗಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಹಾಡಿನ ಚಿತ್ರೀಕರಣ ಬಗ್ಗೆ ಶೀಘ್ರದಲ್ಲೇ ಹೊಸ ಸ್ಪಾಟ್​ನ್ನು ಚಿತ್ರತಂಡ ಹುಡುಕಾಡಲಿದೆ ಎಂದು ಹೇಳಲಾಗಿದೆ.

“ಸ್ಪೇನ್‌ನ ಸುಂದರ ತಾಣಗಳಲ್ಲಿ ಹಾಡೊಂದನ್ನು ಚಿತ್ರೀಕರಿಸಬೇಕೆನ್ನುವುದು ನಮ್ಮ ಯೋಜನೆಯಾಗಿತ್ತು. ನಮ್ಮ ಚಿತ್ರದ ಛಾಯಾಗ್ರಾಹಕರು ಸ್ಥಳವನ್ನು ಅಂತಿಮಗೊಳಿಸಿದ್ದರು. ಭಾನುವಾರ ನಮ್ಮ ತಂಡ ಅಲ್ಲಿಗೆ ಹೊರಟಿತ್ತು. ಅದಾಗ್ಯೂ ಯುರೋಪಿನಲ್ಲಿ ಕೊರೋನಾವೈರಸ್ ಭೀತಿ ಎದುರಾದ ಹಿನ್ನೆಲೆ ಸೋಮವಾರ ಅಲ್ಲಿ ಶೂಟಿಂಗ್ ನಡೆಸದೆ ಮರಳುವ ತೀರ್ಮಾನಕ್ಕೆ ಬರಲಾಗಿದೆ.. ಸಧ್ಯ ಹಾಡಿನ ಚಿತ್ರೀಕರಣ ರದ್ದಾಗಿದೆ” ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top