fbpx
ಸಮಾಚಾರ

ಐಪಿಎಲ್‌ 2020ಗೆ 48 ವರ್ಷದ ಪ್ರವೀಣ್ ತಾಂಬೆಯನ್ನು ಅನರ್ಹಗೊಳಿಸಿದ ಬಿಸಿಸಿಐ: ಕಾರಣವೇನು ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಬಿಸಿಸಿಐ ಶಾಕ್ ನೀಡಿದೆ. ಈ ಬಾರಿಯ ಹರಾಜಿನಲ್ಲಿ ಕೆಕೆಆರ್ ತಂಡ ಸೇರಿದ್ದ ಅತ್ಯಂತ ಹಿರಿಯ ಆಟಗಾರ ಪ್ರವೀಣ್ ತಾಂಬೆ (48) ಅವರನ್ನು ಅನರ್ಹಗೊಳಿಸಲಾಗಿದೆ. ಪ್ರವೀಣ್ ತಾಂಬೆ ತಾವೇ ಮಾಡಿಕೊಂಡ ತಪ್ಪಿನಿಂದ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಪ್ರವೀಣ್ ತಾಂಬೆಯನ್ನು ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡ 20 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. ಖರೀದಿಯ ಬಳಿಕ ಪ್ರವೀಣ್ ತಾಂಬೆ ಅನರ್ಹಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಈ ವಿಚಾರವಾಗಿ ಸ್ವತಃ ಐಪಿಎಲ್ ಮ್ಯಾನೇಜ್‌ಮೆಂಟ್ ಖಚಿತಪಡಿಸಿದೆ. ತಾಂಬೆ ಅನರ್ಹತೆಯನ್ನು ಸ್ಪಷ್ಟಪಡಿಸಿದೆ.

ಪ್ರವೀಣ್ ತಾಂಬೆಯವರು ಬಿಸಿಸಿಐನ ನಿಯಮಗಳನ್ನು ಮೀರಿ ಅಬುಧಾಬಿ ಟಿ10 ಲೀಗ್ ನ ಸಿಂಧೀಸ್ ತಂಡದ ಪರವಾಗಿ ಆಡಿದ್ದರು. ನಿಯಮದ ಪ್ರಕಾರ ಬಿಸಿಸಿಐನ ಅಡಿ ಬರುವ ಯಾವುದೇ ಆಟಗಾರ ವಿದೇಶಿ ಟೂರ್ನಿಗಳಲ್ಲಿ ಆಡುವಂತಿಲ್ಲ. ಆದರೆ ತಾಂಬೆ ಅಬುಧಾಬಿ ಟಿ10 ನಲ್ಲಿ ಭಾಗವಹಿಸಿದ್ದರು. ಹೀಗಾಗಿ ತಾಂಬೆ ಐಪಿಎಲ್ ನಲ್ಲಿ ಆಡುವುದನ್ನು ಬಹಿಷ್ಕರಿಸಲಾಗಿದೆ.

ತಾಂಬೆ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ಕೆಕೆಆರ್‌ ಫ್ರ್ಯಾಂಚೈಸ್ ಗೆ ತಿಳಿಸಲಾಗಿದೆ. ಐಪಿಎಲ್‍ನಲ್ಲಿ ತಾಂಬೆ ಅವರಿಗೆ ಆಡಲು ಅನುಮತಿ ನೀಡುವುದಿಲ್ಲ. ಅವರೊಬ್ಬರಿಗೆ ಆಡಲು ಅವಕಾಶ ನೀಡಿದರೆ ಉಳಿದವರಿಗೂ ಅನುಮತಿ ನೀಡಬೇಕಾಗುತ್ತದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top