fbpx
ಸಮಾಚಾರ

ಪಾದಪೂಜೆಗೆ ಬರುತ್ತಿದ್ದ 20 ವರ್ಷದ ಯುವತಿ ಜೊತೆ ಸ್ವಾಮೀಜಿ ಪರಾರಿ!

ಸರ್ವವನ್ನೂ ತ್ಯಾಗ ಮಾಡಿದ್ದೇವೆ ಎನ್ನುತ್ತಾ ಕಾವಿ ಧರಿಸಿದ ಕೆಲ ಸ್ವಾಮೀಜಿಗಳನ್ನು ನಮ್ಮ ಜನ ಬೇಗ ನಂಬುತ್ತಾರೆ. ಆದರೆ, ಬಳಿಕ ಆ ಕಾವಿಧಾರಿಯ ಬಣ್ಣ ಬಯಲಾಗಿ ಪಶ್ಚಾತಾಪ ಪಟ್ಟ ಅನೇಕ ಘಟನೆಗಳು ನಡೆಯುತ್ತಲೆ ಇವೆ. ಅಂತಹದ್ದೇ ಘಟನೆಯೊಂದು ಕೋಲಾರದಲ್ಲಿ ನಡೆದಿದ್ದು, ಇಲ್ಲಿನ ಸ್ವಾಮೀಜಿಯೊಬ್ಬರು 20 ವರ್ಷದ ಯುವತಿ ಜೊತೆ ಪರಾರಿಯಾಗಿದ್ದಾರೆ.

ಕೋಲಾರ ತಾಲ್ಲೂಕಿನ ಹೊಳಲಿ ಗ್ರಾಮದ 20 ವರ್ಷದ ಯುವತಿ ಶಿವರಾತ್ರಿಯ ದಿನವಾದ ಸೋಮವಾರದ ರಾತ್ರಿಯಿಂದ ನಾಪತ್ತೆಯಾಗಿದ್ದು. ಕೋಲಾರ ಗ್ರಾಮಾಂತರ ಠಾಣೆಗೆ ಯುವತಿಯ ಸೋದರ ಮಾವ ಶಂಕರ್ ದೂರು ನೀಡಿದ್ದಾರೆ. ಯುವತಿ ಆಗಾಗ ಮಠಕ್ಕೆ ಬಂದು ಸ್ವಾಮೀಜಿಯ ಪಾದ ಪೂಜೆ ಮತ್ತು ಇತರೆ ಸಹಾಯ ಮಾಡುತ್ತಿದ್ದಳು. ಈಗ ಸ್ವಾಮೀಜಿ ಆ ಯುವತಿಯ ಜೊತೆ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.

ದತ್ತಾತ್ರೇಯ ಅವಧೂತ ಸ್ವಾಮೀಜಿ ಎಂದು ಹೆಸರಿಟ್ಟುಕೊಂಡು ಸಂಕ್ರಾಂತಿ ಹಬ್ಬದ ದಿನ ಸ್ವಾಮೀಜಿ ಪೀಠವೇರಿದ್ದರು. ಕಳೆದ 3 ದಿನಗಳ ಹಿಂದೆ ಈ ಸ್ವಾಮೀಜಿ ನಾಪತ್ತೆಯಾಗಿದ್ದು, ಅವರ ಭಕ್ತರು ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಸ್ವಾಮೀಜಿಯ ಭಕ್ತೆಯಾಗಿರುವ ಯುವತಿ ಕೂಡ 3 ದಿನಗಳಿಂದ ನಾಪತ್ತೆಯಾಗಿದ್ದಾಳೆ. ಸ್ವಾಮೀಜಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ತಾವೇ ಖುದ್ದಾಗಿ ಯುವತಿಯ ಮನೆಯವರಿಗೆ ಫೋನ್ ಮಾಡಿರುವ ಸ್ವಾಮೀಜಿ, ‘ನಾನು ನಿಮ್ಮ ಮಗಳನ್ನು ತಿರುಪತಿಯಲ್ಲಿ ಮದುವೆಯಾಗಿದ್ದೇನೆ. ಯಾರೂ ಪೊಲೀಸರಿಗೆ ದೂರು ನೀಡಬೇಡಿ’ ಎಂದು ಹೇಳಿದ್ದಾರೆ. ಈ ಕುರಿತು ಯುವತಿಯ ಕುಟುಂಬಸ್ಥರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅದ್ಧೂರಿ ಜಾತ್ರೆಗೆ ಬಳಸಿದ್ದ ಸೌಂಡ್‌ ಸಿಸ್ಟಮ್‌ ಸೇರಿದಂತೆ ಫ್ಲೆಕ್ಸ್‌, ಬ್ಯಾನರ್‌ನವರಿಗೂ ಇನ್ನೂ ಹಣ ನೀಡಿಲ್ಲ. ಗ್ರಾಮದ ಕೆಲವರ ಬಳಿ ಲಕ್ಷಾಂತರ ರುಪಾಯಿ ಹಣ ಕೂಡ ಪಡೆದಿರುವ ಸ್ವಾಮೀಜಿ ರಾತ್ರೋರಾತ್ರಿ ಯುವತಿಯೊಂದಿಗೆ ಪರಾರಿಯಾಗಿದ್ದಾನೆ. ಯುವತಿಯ ಆಧಾರ್‌ ಕಾರ್ಡ್‌, ಮಾರ್ಕ್ಸ್‌ಕಾರ್ಡ್‌, ರೇಷನ್‌ ಕಾರ್ಡ್‌ ಜೊತೆಗೆ ತೆಗೆದುಕೊಂಡು ಹೋಗಿದ್ದಾರೆ.

ಕೋಲಾರ ಗ್ರಾಮಾಂತರ ಪೋಲಿಸ್‌ ಠಾಣೆ ವ್ಯಾಪ್ತಿಯ ಹೊಳಲಿ ಗ್ರಾಮಕ್ಕೆ ಹೊಸದಾಗಿ ಆಗಮಿಸಿದ ದತ್ತಾತ್ರೆಯ ಸ್ವಾಮಿ ಎನ್ನುವವರು ಯುವತಿಯೊಂದಿಗೆ ಹೋಗಿರುವ ಮಾಹಿತಿ ಸಿಕ್ಕಿದೆ. ಸ್ವಾಮಿಜಿಯು ಯುವತಿಯ ಸಂಬಂಧಿಕರಿಗೆ ಫೋನಾಯಿಸಿ ಆಕೆಯನ್ನು ಮದುವೆ ಆಗಿರುವುದಾಗಿ ಹೇಳಿದ್ದಾರೆ. ಪರಾರಿ ಆಗಿರುವ ಇವರನ್ನು ಹುಡುಕಿ ತರಲು ತಂಡ ರಚಿಸಲಾಗಿದೆ ಎಂದು ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top