fbpx
ಸಮಾಚಾರ

ಬೆಳೆ ರಕ್ಷಣೆ ಹೆಸರಲ್ಲಿ ಅಕ್ರಮ ವಿದ್ಯುತ್‌ ಬೇಲಿ :ಎರಡು ಗಂಡಾನೆ ಸಾವು!

ಕಾಡು ಪ್ರಾಣಿಗಳ ರಕ್ಷಣೆಗೆ ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಅದು ಸಾಧ್ಯವಾಗುತ್ತಿಲ್ಲ. ಬೆಳೆ ರಕ್ಷಣೆ ಹೆಸರಿನಲ್ಲಿ ಪ್ರಾಣಿಗಳ ಮಾರಣಹೋಮ ಸಾಗಿಯೇ ಇದೆ. ಈಗ ಚಾಮರಾಜ ನಗರದಲ್ಲಿ ಇಂಥದ್ದೇ ಘಟನೆ ನಡೆದಿದೆ. ಮನುಷ್ಯ ಮಾಡಿದ ತಪ್ಪಿಗೆ ಎರಡು ಗಂಡಾನೆಗಳು ಮೃತಪಟ್ಟಿವೆ.

ಆಹಾರ ಹುಡುಕುತ್ತಾ ಎರಡು ಆನೆಗಳು ಇಲ್ಲಿನ ತಾಳವಾಡಿ ಸಮೀಪದ ಕರಳವಾಡಿ ಗ್ರಾಮಕ್ಕೆ ಆಗಮಿಸಿದೆ. ಅಲ್ಲಿನ ಕರುಪ್ಪು ಸ್ವಾಮಿ ಎಂಬವರ ಜಮೀನಿಗೆ ನುಗ್ಗಿದ ಆನೆಗಳು ಫಸಲು ತಿನ್ನುತ್ತಾ ಮುನ್ನುಗ್ಗುತ್ತಿದ್ದಾಗ ಕಬ್ಬಿನ ಗದ್ದೆಗೆ ಹಾಕಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಎರಡೂ ಆನೆಗಳು ಸಾವನ್ನಪ್ಪಿವೆ.

ಕರಳವಾಡಿ ಗ್ರಾಮ ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದಲ್ಲಿದ್ದು, ಇಲ್ಲಿಗೆ ವನ್ಯಜೀವಿಗಳು ಆಗಾಗ್ಗ ಬರುತ್ತಿರುವುದು ಸಾಮಾನ್ಯವಾಗಿದೆ. ಗ್ರಾಮದ ರೈತರು ತಮ್ಮ ಬೆಳೆಗಳನ್ನು ವನ್ಯಜೀವಿಗಳಿಂದ ರಕ್ಷಿಸಿಕೊಳ್ಳಲು ಗದ್ದೆ, ತೋಟಗಳಿಗೆ ವಿದ್ಯುತ್ ತಂತಿ ಅಳವಡಿಸಿಕೊಂಡಿರುತ್ತಾರೆ. ಆದರೆ ಮೂಕ ಪ್ರಾಣಿಗಳು ಅವುಗಳನ್ನು ತುಳಿದು ಸಾವನ್ನಪ್ಪಿವೆ.

ಈ ಎರಡೂ ಗಂಡಾನೆಗಳು 30-40ರ ವಯೋಮಾನದವು ಎಂದು ಅಂದಾಜಿಸಲಾಗಿದೆ. ಇಂದು ಬೆಳಿಗ್ಗೆ ಗ್ರಾಮಸ್ಥರಿಗೆ ಎರಡೂ ಆನೆಗಳ ಮೃತ ದೇಹಗಳು ಕಂಡುಬಂದಿವೆ. ಇದರ ನಂತರ ರೈತ ಕುರುಪ್ಪು ಸ್ವಾಮಿ ನಾಪತ್ತೆ ಆಗಿದ್ದಾನೆ. ಘಟನಾ ಸ್ಥಳಕ್ಕೆ ತಮಿಳುನಾಡಿನ ಸತ್ಯಮಂಗಲಂ ಜಿಲ್ಲೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top