fbpx
ಸಮಾಚಾರ

ವಿಶೇಷ ದಿನದಂದು ರಿಲೀಸ್ ಆಗ್ತಿದೆ ‘ಕೋಟಿಗೊಬ್ಬ-3’: ತಪ್ಪಿದ ಸ್ಟಾರ್ ವಾರ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಮೋಷನ್ ಪೋಸ್ಟರ್ ಮತ್ತು ಟೀಸರ್ ಗಳು ಸಖತ್ ಸದ್ದು ಮಾಡಿದ್ದು, ಸಿನಿಮಾದ ಬಗ್ಗೆ ಕಾಲಕಾಲಕ್ಕೆ ಅಪ್‌ಡೇಟ್ಸ್ ಸಿಗುತ್ತಿದೆ. ಇತ್ತೀಚೆಗಷ್ಟೇ ಟೀಸರ್ ರಿಲೀಸ್ ಮಾಡಿದ್ದ ಈ ಕೋಟಿಗೊಬ್ಬ ತಂಡ, ಸಿನಿಮಾ ಯಾವಾಗ ರಿಲೀಸ್ ಮಾಡಲಿದೆ ಎಂಬ ಕುತೂಹಲ ಅಭಿಮಾನಿಗಳಿಗಿದೆ. ಈಗ ಚಿತ್ರತಂಡ ವಿಶೇಷ ದಿನದಂದು ಸಿನಿಮಾವನ್ನು ರಿಲೀಸ್ ಮಾಡಲು ಚಿಂತನೆ ನಡೆಸುತ್ತಿದೆ.

ಮೇ 1ಕ್ಕೆ ‘ಕೋಟಿಗೊಬ್ಬ 3’ ಚಿತ್ರವನ್ನು ತೆರೆ ಮೇಲೆ ತರುವ ಪ್ಲ್ಯಾನ್‌ ಮಾಡಲಾಗಿದೆಯಂತೆ. ಅಂದು ಕಾರ್ಮಿಕರ ದಿನ ಎನ್ನೋದನ್ನು ನೆನಪಿಡಬೇಕು. ‘ಅಭಿನಯ ಚಕ್ರವರ್ತಿ’ ಅಭಿನಯದ ‘ಮಾಣಿಕ್ಯ’ ಸಿನಿಮಾ ಕೂಡ ಮೇ 1ರಂದು ರಿಲೀಸ್ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು. ಹೀಗಾಗಿ ಇಂತಹ ಯಶಸ್ಸನ್ನು ಮರುಕಳಿಸುವ ಸಲುವಾಗಿ ಮೇ 1ಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಇದೆಯಂತೆ.

ಈ ಮೊದಲು ಕೋಟಿಗೊಬ್ಬ-3 ಸಿನಿಮಾ ಏಪ್ರಿಲ್ 10ಕ್ಕೆ ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗಿತ್ತು. ವಿಶೇಷ ಅಂದರೆ ಅದೆ ದಿನ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಕೂಡ ತೆರೆಗೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ವಾರ್ ಆಗುವ ಸಾಧ್ಯತೆ ಇತ್ತು. ಆದರೀಗ ಕೋಟಿಗೊಬ್ಬ-3 ಮುಂದಕ್ಕೆ ಹೋಗಿರುವುದರಿಂದ ಸ್ಟಾರ್ ವಾರ್ ತಪ್ಪಿದೆ ಎಂದೇ ಹೇಳಬಹುದು.

ಅಂದಹಾಗೆ ಶಿವಕಾರ್ತಿಕ್ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ನಿರ್ಮಾಪಕ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ. ಕೋಟಿಗೊಬ್ಬ ಸರಣಿಯ 3ನೇ ಆವೃತ್ತಿ ಇದಾಗಿದ್ದು ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಅಂದ್ಹಾಗೆ ಚಿತ್ರದಲ್ಲಿ ಸುದೀಪ್ ಗೆ ಜೋಡಿಯಾಗಿ ಮಲಯಾಳಂ ಬೆಡಗಿ ಮಡೋನಾ ಸೆಬಾಸ್ಟಿನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top