fbpx
ಸಮಾಚಾರ

“ಸುದೀಪ್​ಗೆ ಹೇರ್ ಕಟಿಂಗ್ ಮಾಡುವುದು ನನ್ನ ಜೀವನದ ಗುರಿ” ಚಂದನ್ ಆಚಾರ್ ಹೀಗೆ ಹೇಳಿದ್ಯಾಕೆ?

ಕಿರಿಕ್ ಪಾರ್ಟಿ ಚಿತ್ರದಲ್ಲಿ ಕರ್ಣನ ಸ್ನೇಹಿತನಾಗಿ ಹಾಸ್ಯ ಮಾಡುತ್ತ ಮಿಂಚಿದ್ದ ಹಾಗೂ ಬಿಗ್ ಬಾಸ್ ರಿಯಾಲಿಟಿ ಷೋ ನಲ್ಲಿ ತಮ್ಮ ನೇರ ನಡೆನುಡಿಗಳಿಂದ ಪ್ರೇಕ್ಷಕರ ಮನಗೆದ್ದಿದ್ದ ನಟ ಚಂದನ್ ಆಚಾರ್ ಈಗ ಕ್ಷೌರಿಕರಾಗಿದ್ದರೆ. ಅಷ್ಟಕ್ಕೂ ಅವರಿಗೆ ಕೈಗೆ ಕತ್ತರಿ ಬರಲು ಕಾರಣವೇನು? ಚಂದನ್ ಅವ್ರು ಏನು ಮಾಡಲು ಹೊರಟಿದ್ದಾರೆ ಅಂತೀರಾ? ಮುಂದೆ ಓದಿ!

ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಉತ್ತಮ ನಟನೆ ಮಾಡಿದ ಚಂದನ್ ಆಚಾರ್ ಅವರು ಈಗ ನಾಯಕ ನಟನಾಗಿದ್ದು ಚಂದನ್ ಆಚಾರ್ ಈಗ ‘ಮಂಗಳವಾರ ರಜಾದಿನ` ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಲಿದ್ದಾರೆ! ಚಿತ್ರದಲ್ಲಿ ಕ್ಷೌರಿಕನ ಪಾತ್ರದಲ್ಲಿ ಚಂದನ್ ಆಚಾರ್ ಅಭಿನಯ ಮಾಡುತ್ತಿದ್ದಾರೆ.

 

 

ಸದ್ಯ “ಮಂಗಳವಾರ ರಜಾದಿನ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮಂಗಳವಾರ ಚಿತ್ರದ ಟ್ರೇಲರ್‌ ಅನ್ನು ಯೂ-ಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದೆ. ಚಿತ್ರ ಕ್ಷೌರಿಕನೊಬ್ಬನ ಜೀವನದ ಕಥೆಯನ್ನು ತೆರೆದಿಡುತ್ತಿದೆ. ಚಿತ್ರದಲ್ಲಿ ನಾಯಕ ಚಂದನ್‌ ಆಚಾರ್‌ ಕ್ಷೌರಿಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕ್ಷೌರಿಕ ವೃತ್ತಿ ಆರಂಭಿಸಿದಾಗಿನಿಂದಲೂ, ನಾಯಕನಿಗೆ ಕಿಚ್ಚ ಸುದೀಪ್‌ ಅವರಿಗೆ ಹೇರ್‌ಸ್ಟೈಲ್‌ ಮಾಡಬೇಕೆಂಬ ಆಸೆ ಇರುತ್ತದೆ. ಕೊನೆಗೆ ಆತನ ಆಸೆ ಏನಾಗುತ್ತದೆ ಎಂಬುದು ಚಿತ್ರದ ಕಥೆಯ ಒಂದು ಎಳೆ ಎನ್ನುತ್ತದೆ ಚಿತ್ರತಂಡ. “ಸುದೀಪ್​ಗೆ ಹೇರ್ ಕಟಿಂಗ್ ಮಾಡುವುದು ನನ್ನ ಜೀವನದ ಗುರಿ” ಎಂದು ಟ್ರೈಲರ್ ನಲ್ಲಿ ಚಂದನ್ ಆಚಾರ್ ಒತ್ತಿ ಒತ್ತಿ ಹೇಳುವುದು ಸಿನಿಪ್ರಿಯರ ಗಮನ ಸೆಳೆಯುತ್ತಿದೆ

ಅಂದಹಾಗೆ ಮಂಗಳವಾರ ರಜಾದಿನ` ಚಿತ್ರಕ್ಕೆ ಯುವಿನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಯುವಿನ್ ಈ ಚಿತ್ರದ ಮೊದಲು ಯೋಗರಾಜ್ ಭಟ್ ಹಾಗೂ ಗಡ್ದ ವಿಜಿ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಸಾಕಷ್ಟು ಅನುಭವ ಹೊಂದಿದ್ದಾರೆ. ಈ ಚಿತ್ರಕ್ಕೆ ಉದಯ್ ಲೀಲಾ ರವರು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರಕ್ಕೆ ಮಧುಕುಮಾರ್ ಸಂಕಲನ ನೀಡಿದ್ದಾರೆ. ಸುಧೀರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲಾಸ್ಯಾ ನಾಗರಾಜ್, ಜಹಾಂಗೀರ್, ರಜನಿಕಾಂತ್, ಗೋಪಾಲಕೃಷ್ಣ ದೇಶಪಾಂಡೆ, ನಂದನ್ ರಾಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top