fbpx
ಸಮಾಚಾರ

“70 ಶತಕ ಸಿಡಿಸಿದ್ದು ಮರೆತು ಹೋಯಿತೇ?” ಕೊಹ್ಲಿಯನ್ನು ಟೀಕಿಸಿದವರಿಗೆ ತಿರುಗೇಟು ನೀಡಿದ ಇಂಜಮಾಮ್-ಉಲ್-ಹಕ್!

ಅತೀವ ಒತ್ತಡದಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಪಾಕಿಸ್ತಾನದ ಮಾಜಿ ದಿಗ್ಗಜ ಇಂಜಮಾಮ್ ಉಲ್ ಹಕ್ ಬೆಂಬಲಿಸಿದ್ದಾರೆ. ಅಲ್ಲದೆ ಚಿಂತೆ ಮಾಡುವ ಯಾವುದೇ ಅಗತ್ಯವಿಲ್ಲ. ವಿರಾಟ್ ಕೊಹ್ಲಿ ಮತ್ತಷ್ಟು ಶಕ್ತಿಶಾಲಿಯಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಕೇವಲ 38 ರನ್ ಗಳಿಸಿದ್ದರು. ಇದೇ ಸಮಯದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ 44 ರನ್ ಬಾರಿಸಿದ್ದರು. ಹೀಗಾಗಿ ಕೆಲ ನೆಟ್ಟಿಗರು ಹಾಗೂ ಹಿರಿಯ ಆಟಗಾರರು ವಿರಾಟ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಈ ವಿಚಾರವಾಗಿ ಮಾತನಾಡಿದ ವಿಡಿಯೋವನ್ನು ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ತಂತ್ರದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಇಂಜಮಾಮ್ ಹೇಳಿದ್ದಾರೆ.

 

 

“ಭಾರತದಲ್ಲಿ ವಿರಾಟ್ ಕೊಹ್ಲಿ ಅವರ ಕೊನೆಯ 11-12 ಇನ್ನಿಂಗ್ಸ್‌ಗಳಲ್ಲಿ ಅವರು ಹೆಚ್ಚು ಸಾಧನೆ ಮಾಡದ ಕಾರಣ ಅವರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಕೆಲವರು ಅವರ ಬ್ಯಾಟಿಂಗ್ ತಂತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಎಲ್ಲಾ ಮಾತುಕತೆ ನನಗೆ ಆಘಾತ ತಂದಿದೆ. ಒಬ್ಬ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳನ್ನು ಗಳಿಸಿದ್ದಾರೆ ಮತ್ತು ಅದರ ಹೊರತಾಗಿಯೂ ಜನರು ಅವರ ತಂತ್ರವನ್ನು ಪ್ರಶ್ನಿಸುತ್ತಿದ್ದಾರೆ “ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ!

ಪ್ರತಿ ಆಟಗಾರನೂ ಕೆಟ್ಟ ಸಂದರ್ಭಗಳನ್ನು ಕಾಣುತ್ತಾರೆ. ಆದರೆ ಅದು ಆತನ ಪ್ರಯತನ್ ದ ಕೊರತೆ ಎಂದು ಅರ್ಥವಲ್ಲ ಎಂಬ ಮಾತನ್ನು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶೇಷ ವೀಡಿಯೋದಲ್ಲಿ ಮಾತನಾಡಿದ ಇನ್ಜಮಾಮ್ ಉಲ್ ಹಕ್ ವಿರಾಟ್ ಕೊಹ್ಲಿ ಪರವಹಿಸಿ ಹೇಳಿಕೆಯನ್ನು ನೀಡಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ವಿರಾಟ್ ಕೊಹ್ಲಿ ಪರವಾಗಿ ಮಾತನಾಡಿದ್ದು ಮಾತ್ರವಲ್ಲದೆ ವಿರಾಟ್ ಕೊಹ್ಲಿಗೆ ಇನ್ಜಮಾಮ್ ಉಲ್ ಹಕ್ ಧೈರ್ಯ ತುಂಬುವ ಮಾತುಗಳನ್ನೂ ಆಡಿದ್ದಾರೆ. ವಿರಾಟ್‌ಗೆ ನಾನೇನಾದರು ಸಲಹೆಯನ್ನು ನೀಡಬೇಕೆಂದಿದ್ದರೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆಟದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳು ಅಗತ್ಯವೂ ಇಲ್ಲ ಎಂದಿದ್ದಾರೆ.

ಇತರ ಬ್ಯಾಟ್ಸ್‌ಮನ್‌ಗಳು ಏನು ಮಾಡುತ್ತಿದ್ರು?:
‘ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನ್ಯೂಜಿಲೆಂಡ್‍ನಲ್ಲಿ ಫ್ಲಾಪ್ ಆಯಿತು ಎಂದು ನಾನು ಭಾವಿಸುತ್ತೇನೆ. ಆದರೆ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಏನು ಮಾಡುತ್ತಿದ್ದರು? ಸತ್ಯವೆಂದರೆ ಸೋಲು ಎಲ್ಲಾ ಆಟಗಾರರ ಹೊಣೆಯಾಗಿದೆ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top