fbpx
ಸಮಾಚಾರ

ಕೇಂದ್ರಕ್ಕೆ ಕನ್ನಡ ಪ್ರಾಧಿಕಾರ ಸಲ್ಲಿಸಿದ್ದ ದಾಖಲೆ ಪುಸ್ತಕದಲ್ಲಿ RSS​ ಶಿಫಾರಸು: ಜಿಸಿ ಚಂದ್ರಶೇಖರ್ ಆಕ್ರೋಶ!

ಕೇಂದ್ರ ಸರ್ಕಾರಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಸಲ್ಲಿಸಿದ್ದ ಸರ್ಕಾರ ದಾಖಲೆ ಪುಸ್ತಕದಲ್ಲಿ RSS​ ಶಿಫಾರಸು ಪತ್ರ ಕಂಡುಬಂದಿದೆ. ಸರ್ಕಾರದ ದಾಖಲೆ ಪುಸ್ತಕಗಳಲ್ಲಿ ಸಂಘ-ಸಂಸ್ಥೆಯ ಶಿಫಾರಸು ಪತ್ರ ಕಂಡು ಸಂಸದ ಜಿಸಿ ಚಂದ್ರಶೇಖರ್ ಆಕ್ರೋಶಗೊಂಡಿದ್ದಾರೆ!

ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಸಂಸದರ ನೇತೃತ್ವದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ದೆಹಲಿಗೆ ಬಂದಿತ್ತು. ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ನಿವಾಸದಲ್ಲಿ ನಿಯೋಗದ ಸದಸ್ಯರು ಸಭೆ ಸೇರಿದ್ದರು. ಈ ವೇಳೆ ಸರ್ಕಾರಿ ಕಡತದಲ್ಲಿ ಆರ್​ಎಸ್​ಎಸ್ ಶಿಫಾರಸು ಪತ್ರ ಕಂಡು ಬಂದಿತ್ತು. ಖಂಡಿಸಿ ಕಾಂಗ್ರೆಸ್ ಸಂಸದರು ಪ್ರಾಧಿಕಾರದ ಸಭೆಯಿಂದ ಹೊರ ನಡೆದರು.

 

 

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಜಿಸಿ ಚಂದ್ರಶೇಖರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ” ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಯಾವುದೊ ಒಂದು ವರ್ಗದ ಜನರನ್ನು ಮೆಚ್ಚಿಸುವುದಕ್ಕಾಗಿ ಹೀಗೆ ಮಾಡಲಾಗಿದೆ. ಕನ್ನಡಕ್ಕಾಗಿ ಡಾ.ರಾಜಕುಮಾರ್, ರಾಮಮೂರ್ತಿ ಅವರಿಂದ ಹಿಡಿದು ಎಷ್ಟೋ ಕನ್ನಡದ ಪರ‌ ಹೋರಾಟಗಾರರು ಹೋರಾಡಿದ್ದಾರೆ. ಕನ್ನಡ ಪರ ಹೋರಾಟ ನಡೆಸಲು ರಾಜ್ಯದಲ್ಲಿ ಅನೇಕ ಸಂಘಟನೆಗಳಿವೆ. ಎಷ್ಟೋ ಸಂಘಟನೆಗಳ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದ್ದರೂ ಅವೆಲ್ಲವೂ ಇಂದೂ ಕನ್ನಡ ಪರವಾಗಿ ಹೋರಾಟ ಮಾಡುತ್ತಿದ್ದಾರೆ.”

“ಅಂತಹ ಕನ್ನಡ ಪರ ಹೋರಾಟಗಾರರ ಮನವಿಯನ್ನು ಪುಸ್ತಿಕೆಯಲ್ಲಿ ಅಡಕಗೊಳಿಸಬಹುದಿತ್ತು, ಆದರೆ ಹಾಗೆ ಮಾಡದೆ ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಪರ ಇರುವ ಆರ್‌ಎಸ್ಎಸ್‌ನ ಪತ್ರವನ್ನು ಮುದ್ರಿತ ಪುಸ್ತಿಕೆಯಲ್ಲಿ ಅಳವಡಿಸಿದ್ದು ಅಕ್ಷಮ್ಯ ಅಪರಾಧ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿದ್ದುಅದು ಹೇಗ ಖಾಸಗಿ ಸಂಸ್ಥೆಯೊಂದರ ಮನವಿ ಪತ್ರವನ್ನು ಅಡಕ ಮಾಡುತ್ತಾರೆ. ಇದರ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡ ಇದೆ, ಇದರ ವಿರುದ್ಧ ನಾವು ಸ್ವಾಭಿಮಾನಿ ಕನ್ನಡಿಗರು ಹೋರಾಟ ಮಾಡುತ್ತೇವೆ, ಕನ್ನಡ ಮತ್ತು ಕರ್ನಾಟಕಕ್ಕೆ ಅವಮಾನ ಆಗಲು ನಾವು ಬಿಡುವುದಿಲ್ಲ. ಧರ್ಮ ಜಾತಿ ಮೇಲೆ ರಾಜಕೀಯ ಮಾಡುವ ಇವರು ಕನ್ನಡದ ವಿಚಾರದಲ್ಲಿ ಏನಾದರೂ ರಾಜಕೀಯ ಮಾಡಲು ಬಂದರೆ ಕನ್ನಡಿಗರು ರೊಚ್ಚಿಗೇಳುತ್ತಾರೆ” ಎಂದು ಸಂಸದ ಜಿಸಿ ಚಂದ್ರಶೇಖರ್ ಆಕ್ರೋಶಭರಿತವಾಗಿ ಹೇಳಿದರು!
 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top