fbpx
ಸಮಾಚಾರ

ಚಿತ್ರರಂಗದಲ್ಲಿ 44ವರ್ಷ ಪೂರೈಸಿದ ಪುನೀತ್ ರಾಜಕುಮಾರ್.

ಕನ್ನಡ ಚಿತ್ರರಂಗದ ಪವರ್​​ ಸ್ಟಾರ್ ಪುನೀತ್ ರಾಜ್​​ಕುಮಾರ್​​​ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ನಾಲ್ಕು ದಶಕಗಳೇ ಕಳೆದಿವೆ. ಪುನೀತ್ ರಾಜ್​ಕುಮಾರ್​ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು, ಬಣ್ಣ ಹಚ್ಚಿ ನಟಿಸಿದ ಮೊದಲ ಸಿನಿಮಾ ರಿಲೀಸ್​ ಆಗಿ ಇವತ್ತಿಗೆ 44 ವರ್ಷ ಕಳೆದಿದೆ. ಇದೇನಪ್ಪ ಮುಂದಿನ ತಿಂಗಳು ಪುನೀತ್​ 45ನೇ ವರ್ಷದ ಬರ್ತಡೇ ಆಚರಿಸಿಕೊಳ್ಳುತ್ತಿದ್ದಾರೆ. ಇಂಡಸ್ಟ್ರಿಗೆ ಬಂದು 44 ವರ್ಷಗಳು ಹೇಗೆ ಎಂದು ಹುಬ್ಬೇರಿಸಿಕೊಳ್ಳಬೇಡಿ..

ಪುನೀತ್​ ಒಂಭತ್ತು ತಿಂಗಳ ಮಗುವಾಗಿರುವಾಗಲೇ ರಾಜ್​ಕುಮಾರ್​ ಅವರ ಅಭಿನಯದ ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಅಭಿನಯಿಸಿದ್ದರು. 1975 ಮಾರ್ಚ್​ 17ರಂದು ಈ ಸಿನಿಮಾದ ಚಿತ್ರೀಕರಣ ಆರಂಭವಾಗಿ, 1976 ಫೆಬ್ರವರಿ 28ರಂದು ತೆರೆಕಂಡಿತ್ತು. ಅಂದಿನಿಂದ ಶುರುವಾದ ಅಪ್ಪು ಸಿನಿಮಾ ಜರ್ನಿ ಈ ವರ್ಷ ರಿಲೀಸ್​ ಆಗಿರೋ ನಟಸಾರ್ವಭೌಮನವರೆಗೂ ಸಾಗಿ ಬಂದಿದೆ.

ಈ ಸಿನಿಮಾದಲ್ಲಿ ಪುನೀತ್​ಗೆ ಅವಕಾಶ ಸಿಕ್ಕಿದ್ದೂ ಒಂದು ಆಶ್ಚರ್ಯ. ಈ ಸಿನಿಮಾದಲ್ಲಿ ರಾಜಣ್ಣನ ಮಗುವಾಗಿ ಅಭಿನಯಿಸಲು ಮಕ್ಕಳನ್ನು ಕರೆತರಲಾಗಿತ್ತು. ಚಿತ್ರೀಕರಣ ಆರಂಭವಾದರೂ ಮಕ್ಕಳು ಅಳು ನಿಲ್ಲಿಸುತ್ತಿರಲಿಲ್ಲವಂತೆ. ಇದರಿಂದಾಗಿ ಸೆಟ್​ನಲ್ಲೇ ಇದ್ದ ಪಾರ್ವತಮ್ಮ ಅವರ ಬಳಿಯಿದ್ದ ಪುನೀತ್​ರನ್ನು ಅಣ್ಣಾವ್ರು ಕೇಳಿ ಸಿನಿಮಾದಲ್ಲಿ ಇವನ್ನನ್ನೇ ಎತ್ತುಕೊಂಡು ಚಿತ್ರೀಕರಿಸಲು ಪ್ರಯತ್ನಿಸೋಣ ಎಂದಿದ್ದರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top