fbpx
ಸಮಾಚಾರ

ಕೊರೋನಾ ವೈರಸ್: ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

ನಟ ಯಶ್ ತಮ್ಮ ಪತ್ನಿ, ನಟಿ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಸಲುವಾಗಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪ್ರತಿ ವರ್ಷ ರಾಧಿಕಾ ಹುಟ್ಟುಹಬ್ಬದಂದು ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸುತ್ತಿದ್ದರು. ಆದರೆ ಈ ಬಾರಿ ಯಶ್ ಮನೆಯ ಬಳಿ ಬರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ನಮ್ಮ ಮನೆಯಲ್ಲಿ ಈಗ ಮಕ್ಕಳಿರುವುದರಿಂದ ಹಾಗೂ ಎಲ್ಲ ಕಡೆ ಕೊರೋನಾ ವೈರಸ್ ಹರಡುತ್ತಿರುವ ಕಾರಣ ತುಂಬಾ ಜನ ಸೇರುವುದು ಬೇಡ. ಈ ಬಾರಿ ಯಾವುದೇ ಆಚರಣೆ ಇಲ್ಲ. ಸಂಜೆ ನಾನು ಹಾಗೂ ರಾಧಿಕಾ ಒಟ್ಟಿಗೆ ಎಲ್ಲಿಯಾದರೂ ಹೋಗಿ ಕಾಲ ಕಳೆಯುತ್ತೇವೆ ಅಷ್ಟೇ” ಎಂದು ಯಶ್ ತಿಳಿಸಿದ್ದಾರೆ.

‘ಕೊರೋನಾ ವೈರಸ್‌’ ಹರಡುತ್ತಿರುವುದರಿಂದ ಎಲ್ಲರಿಗೂ ಹ್ಯಾಂಡ್‌ ಶೇಕ್‌ ಮಾಡೋ ಬದಲು ಭಾರತೀಯ ಸಂಸ್ಕೃತಿ ಪ್ರತೀಕವಾದ ನಮಸ್ತೇ ಮಾಡಿ, ನಿಮ್ಮ ಆರೋಗ್ಯ ಸರಿಯಿಲ್ಲವೆಂದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ, ತುಂಬಾ ಜನರು ಇರುವೆಡೆ ಸೇರಬೇಡಿ, ಎಂದು ಯಶ್ ಎಲ್ಲರಿಗೂ ಸಲಹೆ ನೀಡಿದ್ದಾರೆ.

ಮಾರ್ಚ್‌ 7ರಂದು ರಾಧಿಕಾ ಪಂಡಿತ್‌ ಜನ್ಮದಿನ. ಅವರ ಹುಟ್ಟುಹಬ್ಬಕ್ಕೆ ಶುಭಕೋರಬೇಕು ಎಂಬುದು ಎಲ್ಲ ಅಭಿಮಾನಿಗಳ ಆಸೆ. ಮನೆ ಬಳಿ ಬಂದು, ಅವರನ್ನು ಭೇಟಿ ಮಾಡಿ ಫೋಟೋ ತೆಗಿಸಿಕೊಳ್ಳಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ. ಆದರೆ ಅದಕ್ಕೆಲ್ಲ ಈ ಬಾರಿ ಬ್ರೇಕ್‌ ಹಾಕಲಾಗುತ್ತಿದೆ. ಕೊರೊನಾ ವೈರಸ್ ಹರಡುತ್ತಿರುವ ಕಾರಣ ಯಶ್‌ ಎಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top