fbpx
ಸಮಾಚಾರ

31 ವರ್ಷಗಳ ಹಿಂದೆಯೇ ಕನ್ನಡ ಪತ್ರಿಕೆಯಲ್ಲಿ ಬಂದಿತ್ತು ಕೊರೊನಾ ಸುದ್ದಿ!

ಕೊರೊನಾ ವೈರಸ್ ಇಷ್ಟು ದಿನ ದೂರದ ದೇಶದಲ್ಲಿ ಕಾಣಿಸಿಕೊಂಡ ಭಯಾನಕ ಕಾಯಿಲೆಯಾಗಿತ್ತು. ಆದರೆ ಈಗ ನಮ್ಮ ದೇಶದಲ್ಲೂ ಕಾಲಿಟ್ಟಿರುವುದು ಎಲ್ಲರಲ್ಲೂ ಆತಂಕವನ್ನು ಹುಟ್ಟಿಸಿದೆ. ಜಪಾನ್, ಹಾಂಗ್ ಕಾಂಗ್, ಫಿಲಿಪೈನ್ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಲ್ಲಿ ಈ ವೈರಸ್ ತೀವ್ರ ರೀತಿಯಲ್ಲಿ ಕಾಣಿಸಕೊಳ್ಳುತ್ತಿದೆ. ತೈವಾನ್ ಮತ್ತು ಫ್ರಾನ್ಸ್ ದೇಶದಲ್ಲಿ ಈ ವೈರಸ್ ವೇಗವಾಗಿ ಹರಡುತ್ತಿದೆ ಎಂದು ವರದಿಯಾಗಿದೆ. ಇದೀಗ ಈ ವೈರಸ್ ಭಾರತ ದೇಶದಲ್ಲೂ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಚಿಂತನೀಯ ಸಂಗತಿ.

 

 

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಮೆಲ್ಲಗೆ ಜಗತ್ತಿನೆಲ್ಲೆಡೆ ವ್ಯಾಪಿಸುತ್ತಿರುವ ಬಗ್ಗೆ ಅನೇಕ ಸುದ್ದಿಗಳನ್ನು ಈಗಾಗಲೇ ಕೇಳಿರುತ್ತೀರಿ, ಓದಿರುತ್ತೀರಿ. ಇಂಥಾ ಕೊರೊನಾ ವೈರಸ್ ಬಗ್ಗೆ ಬರೊಬ್ಬರಿ 30 ವರ್ಷಗಳ ಹಿಂದೆಯೇ ಕನ್ನಡ ಪತ್ರಿಕೆಯೊಂದರಲ್ಲಿ ಮಾಹಿತಿ ನೀಡಿದ್ದು ಈಗ ಸದ್ದು ಮಾಡುತ್ತಿದೆ. 1989ರ ‘ತರಂಗ’ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಇದರ ತುಣುಕೊಂದು ಇದೀಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪತ್ರಿಕೆಗಳಲ್ಲಿ ಬರುವ ಆರೋಗ್ಯ ಸಂಬಂಧಿ ಮಾಹಿತಿ, ಲೆಖನಗಳನ್ನು ಸಂಗ್ರಹಿಸಿಡುವ ಹವ್ಯಾಸವನ್ನು ಹೊಂದಿರುವ ಮುಕುಂದ ಚಿಪ್ಲೂಂಕರ್ ಎನ್ನುವವರು 31 ವರ್ಷಗಳ ಹಿಂದೆ ಜುಲೈ 16ರ ತರಂಗದಲ್ಲಿ ಪ್ರಕಟಗೊಂಡಿದ್ದ ವೈರಸ್ ಸಂಬಂಧಿ ಮಾಹಿತಿ ಲೇಖನವೊಂದರಲ್ಲಿ ಕೊರೊನಾ ವೈರಸ್ ಕುರಿತಾದ ಮಾಹಿತಿ ಪ್ರಕಟವಾಗಿತ್ತು ಎಂಬುದನ್ನು ಮುಕುಂದ ಅವರು ಪತ್ತೆ ಹಚ್ಚಿ ತಮ್ಮ ಫೇಸ್ಬುಕ್ ಪುಟದಲ್ಲಿ ಹಾಕಿಕೊಂಡಿದ್ದಾರೆ. ಈ ಸಂಚಿಕೆಯಲ್ಲಿ ವಿವಿಧ ವೈರಸ್ ಗಳ ಕುರಿತಾದ ಮಾಹಿತಿ ಇದ್ದು ಅದರಲ್ಲಿ ಒಂದು ಕೊರೊನಾ ವೈರಸ್ ಕುರಿತಾಗಿಯೂ ಮಾಹಿತಿಯನ್ನು ನೀಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top