fbpx
ಸಮಾಚಾರ

ಗುಪ್ತಾಂಗದಲ್ಲಿ 8.31 ಕೋಟಿ ಮೌಲ್ಯದ ಕೊಕೇನ್‌ ಸಾಗಣೆ: ಬೆಂಗಳೂರಲ್ಲಿ ಮಹಿಳೆ ಬಂಧನ

ಮಹಿಳೆಯೊಬ್ಬಳು ತನ್ನ ಗುಪ್ತಾಂಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8.31 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ಮಹಿಳೆಯೊಬ್ಬಳ ಗುಪ್ತಾಂಗದಿಂದ ವಶಪಡಿಸಿಕೊಳ್ಳಲಾಗಿದೆ. ಗುಟೇಮಾಲಾ ದೇಶದ ಮಹಿಳೆಯ ಗುಪ್ತಾಂಗದಲ್ಲಿದ್ದ ಡ್ರಗ್ಸ್ ಕಂಡು ಕಸ್ಟಮ್ಸ್ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.

ಮಹಿಳೆಯ ಗುಪ್ತಾಂಗದೊಳಗೆ ಸುಮಾರು 1 ಕೆಜಿ 385 ಗ್ರಾಂ ತೂಕದ ಕೊಕೇನ್‌ ಪತ್ತೆಯಾಗಿದ್ದು, ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಬಂಧಿತ ಮಹಿಳೆ ಗ್ವಾಟೆಮಾಲಾದವಳಾಗಿದ್ದು, ಇಥಿಯೋಪಿಯಾ ಏರ್‌ಲೈನ್ಸ್‌ ಇಟಿ690 ವಿಮಾನದಲ್ಲಿ ಅದಿಸ್‌ ಅಬಾಬಾದಿಂದ ಬೆಂಗಳೂರಿಗೆ ಬಂದಿಳಿದ ಸಂದರ್ಭ ಬಂಧನಕ್ಕೆ ಒಳಗಾಗಿದ್ದಾಳೆ.

ಗ್ವಾಟೆಮಾಲಾ ದೇಶದ ಪ್ರಜೆಯಾಗಿರುವ ಅವರು ಏರ್‌ಲೈನ್ಸ್ ಇಟಿ-690 ವಿಮಾನದಲ್ಲಿ ಫೆ.2ರಂದು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಮಹಿಳೆಯನ್ನು ತಪಾಸಣೆ ನಡೆಸಿದಾಗ ಅನುಮಾನ ಬರುವ ರೀತಿಯಲ್ಲಿ ವರ್ತಿಸಿದ್ದಳು. ಲೋಹಶೋಧಕ ಯಂತ್ರದಲ್ಲಿ ತಪಾಸಣೆ ನಡೆಸಿದಾಗ ಮಹಿಳೆ ಬಳಿ ಮಾದಕ ವಸ್ತು ಇರುವ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಮಹಿಳೆಯನ್ನು ಮಹಿಳಾ ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

ಅದಿಸ್‌ ಅಬಾಬಾದಿಂದ ವಿಮಾನ ಏರುವ ಮುಂಚೆಯೇ ಅಂದರೆ ಎರಡು ದಿನಗಳ ಮೊದಲೇ ತನ್ನ ಗುಪ್ತಾಂಗದಲ್ಲಿ ಕೊಕೇನ್‌ ಇರಿಸಿಕೊಂಡಿದ್ದಳು ಎನ್ನಲಾಗಿದೆ. ಎನ್‌ಡಿಪಿಎಸ್‌ ಕಾಯ್ದೆ ಅಡಿ ವಿದೇಶಿ ಮಹಿಳೆಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top