fbpx
ಸಮಾಚಾರ

ಮಾರ್ಚ್ 08: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಸ್ಥಳ- ಬೆಂಗಳೂರು.
ಭಾನುವಾರ, ಮಾರ್ಚ್ 08 2019
ಸೂರ್ಯೋದಯ: 6:31am
ಸೂರ್ಯಾಸ್ತ: 6:29pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಫಾಲ್ಗುಣ
ಪಕ್ಷ : ಶುಕ್ಲಪಕ್ಷ
ತಿಥಿ : ಚತುರ್ದಶೀ 27:03
ನಕ್ಷತ್ರ: ಆಶ್ಲೇಷ 06:52
ಯೋಗ: ಸುಕರ್ಮ 21:11
ಕರಣ: ಗರಿಜ 16:49 ವಾಣಿಜ 27:03

ಅಭಿಜಿತ್ ಮುಹುರ್ತ: 12:06 pm – 12:54 pm
ಅಮೃತಕಾಲ : 2:01 am – 3:27 am

ರಾಹುಕಾಲ- 4:57 pm – 6:25 pm
ಯಮಗಂಡ ಕಾಲ- 12:30 pm – 1:59 pm
ಗುಳಿಕ ಕಾಲ- 3:28 pm – 4:57 pm

 

 

ಈದಿನ ಒಳ್ಳೆಯ ದಿನ. ಯಾವ ಕೆಲಸವನ್ನಾದರೂ ನಿಭಾಯಿಸುವ ಮಾನಸಿಕ ಶಕ್ತಿ ನಿಮ್ಮದಾಗಿರುತ್ತದೆ. ಅವಕಾಶಗಳು ನಿಮ್ಮನ್ನು ಅರಸಿ ಬರುವವು. ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಅದು ಆರ್ಥಿಕ ಸದಢತೆಗೆ ಸಹಕಾರಿ ಆಗುವುದು.

ಬದುಕು ಕವಲು ಹಾದಿಯಲ್ಲಿದೆ ಎನ್ನವುದು ನಿಮ್ಮ ಭ್ರಮೆ. ಸಣ್ಣಪುಟ್ಟ ಸಮಸ್ಯೆಗಳು ಜೀವನದಲ್ಲಿ ಎದುರಾಗುವುದು. ಆದರೆ ಅದು ಕೂಡಾ ಮಂಜಿನಂತೆ ಕರಗುವುದು. ಆ ಬಗ್ಗೆ ಹೆಚ್ಚು ಚಿಂತನೆ ಮಾಡದೆ ನಿಶ್ಚಿಂತೆಯಿಂದ ಇರಿ.

ಒಳ್ಳೆಯ ದಿನಗಳು ನಿಮ್ಮ ಪಾಲಿಗೆ ಶುರುವಾಗಿವೆ. ಯಾವ ಕೆಲಸವನ್ನಾದರೂ ನಿಭಾಯಿಸುವ ಮಾನಸಿಕ ಶಕ್ತಿ ಗಳಿಸಿಕೊಂಡಿದ್ದೀರಿ. ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿರುವುದನ್ನು ಗಮನಿಸಿ ಅಚ್ಚರಿ ಪಡುವಿರಿ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿರಿ.

ನಿಮ್ಮ ಕನಸನ್ನು ಕಾರ್ಯರೂಪಕ್ಕೆ ತರುತ್ತೀರಿ. ನಿಮ್ಮ ಯೋಜನೆಗಳು ಶೀಘ್ರವಾಗಿ ಕಾರ್ಯರೂಪಕ್ಕೆ ಬರುತ್ತವೆ. ಕಲಾವಿದರಿಗೆ ಒಳ್ಳೆಯ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು.

 

ನೀವು ಬುದ್ಧಿವಂತರೇನೋ ನಿಜ. ಆದರೆ ಸಮಯಕ್ಕೆ ಸರಿಯಾಗಿ ಮಾತನಾಡಲು ಆಗದೆ ಸಿಕ್ಕಿಹಾಕಿಕೊಳ್ಳುವಿರಿ. ಮಾತಿನ ಬಗ್ಗೆ ಎಚ್ಚರವಿರಲಿ.

 

ಹಣಕಾಸಿನ ವಿಷಯದಲ್ಲಿ ಹಿರಿಯರ ಸಲಹೆಯನ್ನು ಸ್ವೀಕರಿಸಿ. ಇಲ್ಲದೆ ಇದ್ದಲ್ಲಿ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ ಆಗುವುದು. ಬ್ಯಾಂಕಿನ ವ್ಯವಹಾರದಲ್ಲೂ ಎಚ್ಚರಿಕೆಯಿಂದ ಇರಿ.

 

ಹೊಸ ಸ್ನೇಹಿತರ ಪರಿಚಯದಿಂದ ಸಂತೋಷ ಸಿಗಲಿದೆ. ಹೊಸ ಕೆಲಸ ಕೈಗೆತ್ತಿಕೊಳ್ಳುವಾಗ ಆತುರ ಬೇಡ. ಅದರ ಸಾಧಕ ಬಾಧಕಗಳನ್ನು ಅರಿತು ಹೆಜ್ಜೆ ಮುಂದೆ ಇಡಿರಿ, ಒಳಿತಾಗುವುದು.

 

ಹೊಸ ಯೋಜನೆಗಳು ಸ್ವಲ್ಪ ಏರುಪೇರಾಗಲಿವೆ. ಎಲ್ಲಾ ಕಾರ್ಯಗಳೂ ಕಾಂಚಾಣವನ್ನು ಆಶ್ರಯಿಸಿರುವುದರಿಂದ ಯಶಸ್ಸು ಸಂಪಾದಿಸಲು ಯಥೇಚ್ಛವಾಗಿ ಹಣ ಖರ್ಚು ಮಾಡಬೇಕಾಗುವುದು. ನಿಮ್ಮ ಕಾರ್ಯ ಯೋಜನೆಯನ್ನು ಹಂತಹಂತವಾಗಿ ಮಾಡಿ.

 

ನಿಮ್ಮ ಆರೋಗ್ಯದ ಕಾಳಜಿ ತೆಗೆದುಕೊಳ್ಳಿ. ಅನಾರೋಗ್ಯದ ಸಮಸ್ಯೆ ಕಾಡುವುದು. ವೃಥಾ ತಿರುಗಾಟ. ಕೌಟುಂಬಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವವು. ಹಣಕಾಸಿನ ಸ್ಥಿತಿ ಉತ್ತಮ.

ನೀವು ಹೆಚ್ಚು ಕ್ರಿಯಾಶೀಲರಾಗುವಿರಿ. ನಿಮ್ಮ ಪರಿಶ್ರಮದಿಂದ ಮುಗಿಯದ ಹಳೆಯ ಕೆಲಸಗಳು ಕೈಗೂಡುವವು. ಮಾನಸಿಕ ನೆಮ್ಮದಿಯ ಜೊತೆಯಲ್ಲಿ ಸಾಮಾಜಿಕ ಮನ್ನಣೆಯೂ ದೊರೆಯುವುದು. ಆರ್ಥಿಕ ಭದ್ರತೆಗೆ ತೊಂದರೆ ಇಲ್ಲ.

 

 

ಇಷ್ಟಪಟ್ಟ ಕಾರ್ಯಗಳಲ್ಲಿ ಅಲ್ಪ ಅಡೆತಡೆಗಳು ಉಂಟಾಗುವುದಾದರೂ ಮಧ್ಯಾಹ್ನದ ವೇಳೆಗೆ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬರುವುದು. ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುವುದರಿಂದ ಹಣಕಾಸಿನ ತೊಂದರೆ ಇರುವುದಿಲ್ಲ.

ಆರೋಗ್ಯ ಮತ್ತು ಮನೆ ವಾತಾವರಣದಲ್ಲಿ ಪೂರಕ ವಾತಾವರಣ. ಖರ್ಚು ವೆಚ್ಚಗಳು ಒಂದು ಹಂತದ ತಹಬದಿಗೆ ಬರುವವು. ಸಂಗಾತಿಯ ಮೆಚ್ಚುಗೆ ನುಡಿ ನಿಮ್ಮನ್ನು ಹರ್ಷಯುಕ್ತರನ್ನಾಗಿ ಮಾಡುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top