fbpx
ಸಮಾಚಾರ

“ಬಿಜೆಪಿಯಿಂದ ಬೇರ್ಪಟ್ಟಿದ್ದು, ಹಿಂದುತ್ವದಿಂದಲ್ಲ” ರಾಮಮಂದಿರ ನಿರ್ಮಾಣಕ್ಕೆ 1 ಕೋಟಿ ದೇಣಿಗೆ ಘೋಷಿಸಿದ ಉದ್ಧವ್ ಠಾಕ್ರೆ

ಸೈದ್ಧಾಂತಿಕವಾಗಿ ವಿಭಿನ್ನವಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ನಮ್ಮ ಸರ್ಕಾರವು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ₹1 ಕೋಟಿ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.

ಮಹಾರಾಷ್ಟ್ರ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ್ದ ಉದ್ಧವ್ ಠಾಕ್ರೆ ರಾಮಲಲ್ಲಾ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೈದ್ಧಾಂತಿಕವಾಗಿ ವಿಭಿನ್ನವಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ನಮ್ಮ ಸರ್ಕಾರವು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂ ನೀಡಲಿದೆ ಎಂದು ಘೋಷಣೆ ಮಾಡಿದರು.

ಈ ವೇಳೆ, ‘ನಾನು ಬಿಜೆಪಿಯಿಂದ ಬೇರ್ಪಟ್ಟಿದ್ದೇನೆ ಹೊರತು ಹಿಂದುತ್ವದಿಂದ ಅಲ್ಲ. ಹಿಂದುತ್ವವೇ ಬೇರೆ ವಿಚಾರ. ಹಾಗಾಗಿ ನಾನು ಅದರಿಂದ ಬೇರ್ಪಟ್ಟಿಲ್ಲ. ಕೊನೆಯ ಬಾರಿಗೆ ನಾನು ಇಲ್ಲಿ ಬಂದಿದ್ದಾಗ, ರಾಮ ಮಂದಿರದ ವಿಚಾರವು ಗೊಂದಲದಲ್ಲಿತ್ತು. ನಾನು 2018ರ ನವೆಂಬರ್‌ನಲ್ಲಿ ನಾನಿಲ್ಲಿಗೆ ಬಂದಿದ್ದೆ. ಇದೀಗ ನಾನು ಮೂರನೇ ಬಾರಿಗೆ ಇಲ್ಲಿಗೆ ಬಂದಿದ್ದೇನೆ ಮತ್ತು ನಾನು ಇಲ್ಲಿಗೆ ಬಂದಾಗಲೆಲ್ಲಾ ನನಗೆ ಅದು ಒಳ್ಳೆಯ ಸುದ್ದಿಯನ್ನು ತರುತ್ತದೆ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top