ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು ಎನ್ನಲಾದ ಟ್ವೀಟ್ನ ಸ್ಕ್ರೀನ್ಶಾಟ್ ವಾಟ್ಸ್ಆ್ಯಪ್ನಲ್ಲಿ ವೈರಲ್ ಆಗಿದೆ. ಹಿಂದಿಯಲ್ಲಿರುವ ಟ್ವೀಟ್ ಸ್ಕ್ರೀನ್ಶಾಟ್ ಪ್ರಕಾರ, ಮೂಳೆ ಕ್ಯಾನ್ಸರ್ನಿಂದ ಬಳಲುತ್ತಿರುವ ಅಮಿತ್ ಶಾ ಶೀಘ್ರ ಗುಣಮುಖರಾಗಲು ಮುಸ್ಲಿಂ ಸಮುದಾಯದ ಆಶೀರ್ವಾದ ಕೋರಿದ್ದಾರೆ.
ಮೂಲತಃ ಹಿಂದಿಯಲ್ಲಿ ಮಾಡಿದ ಟ್ವೀಟ್ನ ಸಡಿಲವಾದ ಅನುವಾದ ಹೀಗಿದೆ, “ನನ್ನ ದೇಶದ ಜನರೇ, ನಾನು ತೆಗೆದುಕೊಂಡ ಪ್ರತಿಯೊಂದು ಹೆಜ್ಜೆಯೂ ದೇಶದ ಹಿತದೃಷ್ಟಿಯಿಂದ ಆಗಿದೆ, ಯಾವುದೇ ಜಾತಿ ಅಥವಾ ಧರ್ಮದ ಯಾವುದೇ ವ್ಯಕ್ತಿಯೊಂದಿಗೆ ನನಗೆ ದ್ವೇಷವಿಲ್ಲ. ಕೆಲವು ದಿನಗಳಿಂದ ನನ್ನ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ದೇಶದ ಜನರಿಗೆ ಸೇವೆ ಸಲ್ಲಿಸುವುದು ನನಗೆ ಸಾಧ್ಯವಾಗಲಿಲ್ಲ. ಗಂಟಲಿನ ಹಿಂಭಾಗದಲ್ಲಿ ನಾನು ಮೂಳೆ ಕ್ಯಾನ್ಸರ್ಗೆ ತುತ್ತಾಗಿದ್ದೇನೆ ಎಂದು ಹೇಳಲು ನಾನು ವಿಷಾಧಿಸುತ್ತೇನೆ. ರಂಜಾನ್ ಹಬ್ಬದ ಈ ಸಂತೋಷದ ತಿಂಗಳಲ್ಲಿ ಮುಸ್ಲಿಂ ಸಮಾಜದ ಜನರು ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿ. ನಾನು ಮತ್ತೆ ಆರೋಗ್ಯವಂತನಾದ ತಕ್ಷಣ ನಾನು ಅವರಿಗೆ ಸೇವೆ ಸಲ್ಲಿಸುತ್ತೇನೆ” ಎಂದಿದೆ.
ಆದರೆ ಈ ಟ್ವೀಟ್ ಅಧಿಕೃತವಾದುದಲ್ಲ, ಇದೊಂದು ಫೇಕ್ ಟ್ವಿಟರ್ ಸ್ಕ್ರೀನ್ಶಾಟ್ ಎಂಬುದು ತಿಳಿದುಬಂದಿದೆ. ವೈರಲ್ ಆಗಿರುವ ಟ್ವೀಟ್, ಅಧಿಕೃತ ಟ್ವೀಟ್ ರೀತಿಯಲ್ಲಿ ಸೃಷ್ಟಿಸಲಾಗಿದೆ. ಮೊಬೈಲ್ನಲ್ಲಿ ಅಧಿಕೃತ ಟ್ವೀಟ್ನಂತೆಯೇ ಕಾಣಿಸುವಂತೆ ಸಿದ್ಧಪಡಿಸಲಾಗಿದೆ.
मेरे स्वास्थ्य की चिंता करने वाले सभी लोगों को मेरा संदेश। pic.twitter.com/F72Xtoqmg9
— Amit Shah (@AmitShah) May 9, 2020
ಇನ್ನು ಆರೋಗ್ಯ ಕುರಿತು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಾನು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದ ಕಾರಣ ಸಾಮಾಜಿಕ ಜಾಲತಾಣದ ಕುರಿತು ಹೆಚ್ಚಿನ ಗಮನ ಹರಿಸಿಲ್ಲ. ಆದರೆ ಹಲವರು ಶೀಘ್ರದಲ್ಲೇ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದರು. ಹೀಗಾಗಿ ಸ್ಪಷ್ಟನೆ ನೀಡುತ್ತಿದ್ದೇನೆ. ನನ್ನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ಖಾಯಿಲೆಯಿಂದಲೂ ಬಳಲುತ್ತಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು 55 ವರ್ಷದ ಅಮಿತ್ ಶಾ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
