fbpx
ಸಮಾಚಾರ

ತೆಲುಗಿನ ಚಾನೆಲ್ ವಿರುದ್ಧ ಆಕ್ರೋಶಗೊಂಡ ಕೆಜಿಎಫ್ ಚಿತ್ರತಂಡ: ಕಾರಣವೇನು?

ತೆಲುಗು ಸ್ಥಳೀಯ ವಾಹಿನಿಯ ವಿರುದ್ಧ ಕೆಜಿಎಫ್ ಚಿತ್ರತಂಡ ಆಕ್ರೋಶ ಹೊರಹಾಕಿದೆ. ಅಲ್ಲದೆ ಆ ಚಾನಲ್ ವಿರುದ್ಧ ಕಾನೂನು ಬದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಅಷ್ಟಕ್ಕೂ ಏನಿದು ವಿಚಾರ ಅಂತೀರಾ? ಮುಂದೆ ಓದಿ!

ತೆಲುಗಿನ ಒಂದು ಲೋಕಲ್‌ ಚಾನಲ್‌ ಅಧಿಕೃತವಾಗಿ ನಿರ್ಮಾಪಕರಿಂದ ಪ್ರಸಾರದ ಹಕ್ಕುಗಳನ್ನು ಖರೀದಿಸದೇ ‘ಕೆಜಿಎಫ್‌’ ಪ್ರಸಾರ ಮಾಡಿದೆ. ಇದು ಈಗ ನಿರ್ಮಾಪಕರ ಗಮನಕ್ಕೂ ಬಂದಿದ್ದು, ವಾಹಿನಿ ವಿರುದ್ಧ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ, ಹೀಗೆ ಅಕ್ರಮವಾಗಿ ಸಿನಿಮಾ ಪ್ರಸಾರ ಮಾಡಿರುವ ವಾಹಿನಿಗೆ ಒಂದು ಖಡಕ್‌ ಎಚ್ಚರಿಕೆಯನ್ನೂ ನೀಡಿದ್ದಾರೆ.

ತೆಲುಗು ವಾಹಿನಿ ಎವರಿ (Every) ಎಂಬ ಸ್ಥಳೀಯ ಚಾನಲ್ ಒಂದರಲ್ಲಿ ಕೆಜಿಎಫ್ ಚಾಪ್ಟರ್ 1 ರ ತೆಲುಗು ಅವತರಣಿಕೆಯನ್ನು ಅಕ್ರಮವಾಗಿ ಪ್ರಸಾರ ಮಾಡಲಾಗಿದೆ. ಇದೀಗ ಚಾನಲ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿರುವ ಚಿತ್ರ ವಿತರಕ ಕಾರ್ತಿಕ್ ಗೌಡ ತಮ್ಮ ಟ್ವಿಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ.

 

 

ಕೆ.ಜಿ.ಎಫ್​ ಚಿತ್ರ ಸ್ಯಾಟಲೈಟ್​​ ಹಕ್ಕುಗಳ ಬಗೆಗಿನ ಮಾತುಕತೆ ಅಂತಿಮ ಹಂತದಲ್ಲಿ ಇರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ, ನಾವು ಈ ಕುರಿತು ಕಾನೂನು ಹೋರಾಟ ನಡೆಸುತ್ತೇವೆ. ನಮ್ಮ ಬಳಿ ಟಿವಿ ಚಾನೆಲ್​ ಪ್ರಸಾರ ಮಾಡಿರುವ ಸ್ಕ್ರೀನ್​​ ಶಾಟ್​ ಮತ್ತು ವಿಡಿಯೋ ಸಾಕ್ಷಿಗಳಿವೆ ಎಂದು ಕೆ.ಜಿ.ಎಫ್​ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top