ರಾಜ್ಯದಲ್ಲಿ ಇಂದು ಹೊಸದಾಗಿ 10 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ. ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 858
ಮೃತಪಟ್ಟವರು: 31
ಗುಣಮುಖರಾದವರು: 422
ಹೊಸ ಪ್ರಕರಣಗಳು: 10ಇತರೆ ಮಾಹಿತಿ: ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.#KarnatakaFightsCorona #IndiaFightsCorona pic.twitter.com/acZkWkot0L
— CM of Karnataka (@CMofKarnataka) May 11, 2020
849ನೇ ಸಂಖ್ಯೆಯ ರೋಗಿ ಕಲಬುರಗಿಯ 38 ವರ್ಷದ ಪುರುಷನಾಗಿದ್ದು, 850, 851 ಹಾಗೂ 852ನೇ ಸಂಖ್ಯೆಯ ರೋಗಿಗಳು ದಾವಣಗೆರೆಯವರಾಗಿದ್ದಾರೆ. 853ನೇ ಸೋಂಕಿತ ಹಾವೇರಿ ಜಿಲ್ಲೆ ಶಿಗ್ಗಾವಿಯ 26 ವರ್ಷದ ಯುವಕ, 854ನೇ ರೋಗಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ 20 ವರ್ಷದ ಯುವಕ ಹಾಗೂ 855ನೇ ರೋಗಿ ಬದಾಮಿಯ 28 ವರ್ಷದ ಯುವಕನಾಗಿದ್ದಾರೆ.856ನೇ ಸೋಂಕಿತೆ ವಿಜಯಪುರದ 20 ವರ್ಷದ ಯುವತಿ, 857 ಹಾಗೂ 858ನೇ ರೋಗಿಗಳು ಬೀದರ್ ನ ಪುರುಷರಾಗಿದ್ದಾರೆ.
ಕರ್ನಾಟಕದಲ್ಲಿ ಜಿಲ್ಲಾವಾರು ಅಂಕಿ ಅಂಶಗಳನ್ನು ನೋಡುವುದಾದರೆ 177 ಪ್ರಕರಣಗಳನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಬೆಳಗಾವಿ 113 ಕೇಸ್ ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಮೈಸೂರು 88 ಹೊಂದಿದ್ದು ಮೂರನೇ ಸ್ಥಾನದಲ್ಲಿದೆ. ಇಂದಿನ ವರದಿಯಲ್ಲಿ ಮೂರು ಪ್ರಮುಖ ಜಿಲ್ಲೆಗಳಲ್ಲಿ ಹೊಸ ಕೇಸ್ ದಾಖಲಾಗಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
