fbpx
ಸಮಾಚಾರ

ಕೊರೊನಾ ನಿಯಂತ್ರ­ಣಕ್ಕಾಗಿ ತಾನೇ ತಯಾರಿಸಿದ್ದ ಔಷಧ ಸೇವಿಸಿ ಸಂಶೋಧಕ ಸಾವು!

ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್ ನಿಯಂತ್ರ­ಣಕ್ಕಾಗಿ ತಾನೇ ತಯಾರಿಸಿದ್ದ ಔಷಧ ಸೇವಿಸಿ ಫಾರ್ಮಾಸಿಸ್ಟ್‌ವೊ­ಬ್ಬರು ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈ ಮೂಲದ ಬಯೋಟೆಕ್ ಸಂಸ್ಥೆಯೊಂದರ ಜನರಲ್ ಮ್ಯಾನೆಜರ್ ಶಿವನೇಶನ್ ಅವರು, ಮಹಾಮಾರಿ ಕೊರೋನಾ ವೈರಸ್ ಗೆ ಔಷಧಿ ಕಂಡುಹಿಡಿದು, ಅದನ್ನು ತಾನೇ ಸೇವಿಸಿ ಮೃತಪಟ್ಟಿದ್ದಾರೆ.

ಕೆ.ಶಿವನೇಶನ್‌ ಮತ್ತು ಆರ್ಯುರ್ವೇದ ಮತ್ತು ಹರ್ಬಲ್‌ ಉತ್ಪನ್ನಗಳ ತಯಾರಿಕಾ ಸಂಸ್ಥೆಯ ಮಾಲೀಕ ಡಾ. ರಾಜ್‌ಕುಮಾರ್ ಇಬ್ಬರೂ ನೈಟ್ರಿಕ್‌ ಆಕ್ಸೈಡ್‌ ಹಾಗೂ ಸೋಡಿಯಂ ನೈಟ್ರೇಟ್‌ ಬಳಸಿ ಕೊರೊನಾ ಸೋಂಕು ನಿವಾರಕ ಔಷಧ ತಯಾರಿಸಲು ಸಿದ್ಧತೆ ನಡೆಸಿದ್ದರು.

ಇಬ್ಬರೂ ಒಡಗೂಡಿ ಒಂದು ಮಿಶ್ರಣವನ್ನು ನೈಟ್ರಿಕ್‌ ಆಕ್ಸೈಡ್‌ ಹಾಗೂ ಸೋಡಿಯಂ ನೈಟ್ರೇಟ್‌ ಬಳಸಿ ತಯಾರಿಸಿದ್ದರು. ಅದರ ಪ್ರಯೋಗಾರ್ಥ ಪರೀಕ್ಷೆಗೆ ಶಿವನೇಸನ್ ಮತ್ತು ರಾಜಕುಮಾರ್ ಇಬ್ಬರೂ ಮುಂದಾಗಿ ಅದನ್ನು ಸೇವಿಸಿದರು. ಈ ಮಿಶ್ರಣ ಸೇವಿಸಿದ ಕೆಲ ಹೊತ್ತಿನಲ್ಲೇ ಇಬ್ಬರಿಗೂ ಅಸ್ವಸ್ಥತೆ ಕಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದರಲ್ಲಿ ಶಿವನೇಸನ್ ಮೃತಪಟ್ಟಿದ್ದಾರೆ ರಾಜಕುಮಾರ್ ಚಿಕಿತ್ಸೆಯ ನಂತರ ಸುಧಾರಿಸಿಕೊಂಡಿದ್ದು, ಆರೋಗ್ಯಕರವಾಗಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top