fbpx
ಸಮಾಚಾರ

ಕೊರೋನಾ ನಿಯಂತ್ರಣಕ್ಕೆ ಹುಚ್ಚ ವೆಂಕಟ್ ಕೊಟ್ಟ ಐಡಿಯಾ ಕೇಳಿ ಸುಸ್ತಾದ ನೆಟ್ಟಿಗರು: ವಿಡಿಯೋ ಫುಲ್ ವೈರಲ್

ಕೆಲ ದಿನಗಳಿಂದ ಯಾವ ರಗಳೆ ರಾಮಾಯಣಗಳೂ ಇಲ್ಲದೆ ತನ್ನ ಪಾಡಿಗೆ ತಾನಿದ್ದಂತಿದ್ದ ಸ್ವಯಂ ಘೋಷಿತ ವಿಶ್ವ ವಿಖ್ಯಾತ ನಟ ಹುಚ್ಚಾ ವೆಂಕಟ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಹಾಗಂತ ಈ ಬಾರಿ ಆತ ಯಾವುದೋ ರಂಖಲು ಮಾಡಿಕೊಂಡು ಅರಚಾಡುತ್ತಾ ಮಾಧ್ಯಮದವರನ್ನು ಭೇಟಿಯಾಗಿಲ್ಲ. ಬದಲಾಗಿ ವಿಶ್ವದಾದ್ಯಂತ ಕಾಡುತ್ತಿರುವ ಕೊರೋನಾ ವೈರಸ್ ನಿಯಂತ್ರಣಕ್ಕೆ ಐಡಿಯಾ ಕೊಟ್ಟು ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಏನದು ಐಡಿಯಾ? ಇಲ್ಲಿದೆ ಮಾಹಿತಿ.

“ದೇಹದಲ್ಲಿ ರಕ್ತದ ಒತ್ತಡ ಅಥವಾ ಬಿಪಿ ಕಂಡುಹಿಡಿಯುವುದಕ್ಕೆ ಹೇಗೆ ಯಂತ್ರಗಳಿವೆಯೋ ಅದೇ ರೀತಿ ಕೊರೋನಾಗೂ ಬೇಕು. ಅದೇ ಮಾದರಿಯಲ್ಲಿ ಕೊರೋನಾ ಇದ್ಯಾ ಇಲ್ವಾ ಎಂದು ನಾವು ಮನೆಯಲ್ಲಿಯೇ ನೋಡಿಕೊಳ್ಳಬಹುದು. ಹೀಗೆ ಮಾಡಿದ್ರೆ ಕೊರೋನಾ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ” ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

 

 

ತಮ್ಮದೇ ಯೂಟ್ಯೂಬ್ ಚಾನೆಲ್ ನ ವಿಡಿಯೋದಲ್ಲಿ ಮಾತನಾಡಿರುವ ವೆಂಕಟ್, ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹೇಳುತ್ತಿರುವುದು. ಇಸ್ರೋ ವಿಜ್ಞಾನಿಗಳು ಈವರೆಗೂ ಏನೇನೋ ಕಂಡು ಹಿಡಿದಿದ್ದಾರೆ. ಹಲವು ವಿಜ್ಞಾನಿಗಳು ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ. ಅದೇ ರೀತಿ ಕೊರೊನಾ ವೈರಸ್ ಪತ್ತೆ ಹಚ್ಚಲು ಸಣ್ಣ ಯಂತ್ರವನ್ನು ಕಂಡುಹಿಡಿಯಬೇಕಿದೆ. ಈಗ ಬಿಪಿ ಚೆಕ್ ಮಾಡಲು ಸಣ್ಣ ಯಂತ್ರ ಇದೆ. ಅದೇ ರೀತಿ ಕೊರೊನಾ ಕಂಡು ಹಿಡಿಯಲು ಯಂತ್ರ ಕಂಡುಹಿಡಿಯಬೇಕು ಎಂದು ಹೇಳಿದ್ದಾರೆ.

ಇದರಿಂದ ನಾವು ನಮ್ಮ ಮನೆಗಳಲ್ಲೇ ಕುಳಿತು ಕೊರೊನಾ ಇದೆಯೋ, ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಈ ಕುರಿತು ಇಸ್ರೋ ವಿಜ್ಞಾನಿಗಳು ಹಾಗೂ ವೈದ್ಯರು ಜೊತೆಗೂಡಿ ಇಂತಹದ್ದೊಂದು ಯಂತ್ರವನ್ನು ಕಂಡುಹಿಡಿಯಬೇಕು. ಇದರಿಂದಾಗಿ ಬೇಗ ಸೋಂಕು ಪತ್ತೆಯಾಗುತ್ತದೆ, ತಕ್ಷಣವೇ ಆಸ್ಪತ್ರೆಗೆ ಹೋಗಬಹುದು. ಆಗ ಕೊರೊನಾ ಹರಡುವಿಕೆ ಕಡಿಮೆಯಾಗುತ್ತದೆ. ಅಲ್ಲದೆ ವೈದ್ಯರು ಇತರರ ಆರೋಗ್ಯ ಕಾಪಾಡುವುದರ ಜೊತೆಗೆ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸದ್ಯ ಟಿಕ್‌ ಟಾಕ್‌ ಮೂಲಕ ಈ ವಿಡಿಯೋ ವೈರಲ್ ಆಗಿದೆ. ಟಿಕ್‌ಟಾಕ್‌ನಲ್ಲಿ ಸಾವಿರಾರು ಜನರು ಹುಚ್ಚ ವೆಂಕಟ್ ಮಾಡಿರೋ ವಿಡಿಯೋಗೆ ಲೈಕ್ ಒತ್ತಿದ್ದಾರೆ. ಜತೆಗೆ ಸಾಕಷ್ಟು ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವರು ಒಳ್ಳೆಯ ಸಲಹೆ ಎಂದು ಹೇಳಿದರೆ, ಇನ್ನೂ, ಕೆಲವರು ಇದಕ್ಕೆ ನೆಗೆಟಿವ್‌ ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ, ಹುಚ್ಚ ವೆಂಕಟ್ ಈ ವಿಡಿಯೋ ಮಾಡಿರೋದು ಎರಡು ತಿಂಗಳ ಹಿಂದೆ! ಸದ್ಯ ಈ ವಿಡಿಯೋ ಈಗ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top