fbpx
ಸಮಾಚಾರ

ವಿವಾದಕ್ಕೆ ಕಾರಣವಾದ ಮುತ್ತಪ್ಪ ರೈ ಅಂತ್ಯಕ್ರಿಯೆ: 7 ಮಂದಿ ಅರೆಸ್ಟ್

ನೆನ್ನೆ ಬೆಳಗ್ಗಿನ ಜಾವ ವಿಧಿವಶರಾಗಿದ್ದ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬಿಡದಿಯ ಅವರ ನಿವಾಸದ ಆವರಣದಲ್ಲಿ ಪುತ್ರ ರಿಕ್ಕಿ ಮುತ್ತಪ್ಪ ರೈ ಅವರಿಂದ ನೆರವೇರಿತು.. ರಿಕ್ಕಿ ರೈ ತಮ್ಮ ತಂದೆಯ ಪಾರ್ಥಿವ ಶರೀರಕ್ಕೆ ಸಂಜೆ 4.45ರ ವೇಳೆಗೆ ಅಗ್ನಿ ಸ್ಪರ್ಶ ಮಾಡಿದರು. ಗಾಳಿಯಲ್ಲಿ ಗುಂಡು ಹಾರಿಸಿ ರೈ ಅವರಿಗೆ ಅಂತಿಮ ವಿದಾಯ ಹೇಳಲಾಯಿತು.

ಅಂತ್ಯಕ್ರಿಯೆ ವೇಳೆ ಮುತ್ತಪ್ಪ ರೈ ಅವರಿಗೆ ಗನ್ ಮ್ಯಾನ್ ಗಳಾಗಿ ಕೆಲಸ ಮಾಡುತ್ತಿದ್ದವರು ಗೌರವ ಸೂಚಕವಾಗಿ 5 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು., ಈ ಸಂದರ್ಭದಲ್ಲಿ ಆಯೋಜಕರು ಕಾನೂನು ಉಲ್ಲಂಘನೆ ತಡೆಗಟ್ಟುವಲ್ಲಿ ವಿಫಲರಾಗಿದ್ದರು. ಮುತ್ತಪ್ಪ ರೈ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ. ಮೋನಪ್ಪ, ಗಿರೀಶ್, ಲಕ್ವಿರ್ ಸಿಂಗ್, ಚಾತರ್ ಸಿಂಗ್, ರಂಜಿತ್ ರೈ, ಸುನಿಲ್ ಹಾಗೂ ಪ್ರಕಾಶ್ ರೈ ಬಂಧಿತ ಆರೋಪಿಗಳು. ಗುಂಡು ಹಾರಿಸಲು ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಬಿಡದಿ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಆಯೋಜಕ ಪ್ರಕಾಶ್ ರೈ ಸೇರಿ ಏಳು ಜನರನ್ನು ದಸ್ತಗಿರಿ ಮಾಡಲಾಗಿದೆ. ಜೊತೆಗೆ ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದ್ದು, ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಬಿಡದಿ ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಬಿಡದಿ ಠಾಣೆಯಲ್ಲಿ ಗುನ್ನೆ ಸಂಖ್ಯೆ 135/20 ರಲ್ಲಿ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಇದರಲ್ಲಿ ಅಯೋಜಕ ಪ್ರಕಾಶ್ ರೈ ಸೇರಿ ಏಳು ಜನರನ್ನು ದಸ್ತಗಿರಿ ಮಾಡಲಾಗಿದೆ. ಬಳಸಿದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top