fbpx
ಸಮಾಚಾರ

ಮೇ 23: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಸ್ಥಳ- ಬೆಂಗಳೂರು.
ಶನಿವಾರ, ಮೇ 23 2020
ಸೂರ್ಯೋದಯ: 6:52am
ಸೂರ್ಯಾಸ್ತ: 6:40pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಜ್ಯೇಷ್ಠ
ಪಕ್ಷ : ಶುಕ್ಲಪಕ್ಷ
ತಿಥಿ :ಪ್ರತಿಪತ್ 24:16
ನಕ್ಷತ್ರ: ರೋಹಿಣಿ 28:52
ಯೋಗ: ಅತಿಗಂಡ 06:35
ಕರಣ: ಕಿಮ್ಸ್ತುಗ್ನ 11:45 ಬಾವ 24:16

ಅಭಿಜಿತ್ ಮುಹುರ್ತ: 11:51 am – 12:41 pm
ಅಮೃತಕಾಲ :1:26 am – 3:09 am

ರಾಹುಕಾಲ- 9:06 am – 10:41 am
ಯಮಗಂಡ ಕಾಲ- 1:51 pm – 3:26 pm
ಗುಳಿಕ ಕಾಲ- 5:56 am – 7:31 am

 

 

 

ಮೇಷ (Mesha)

ನಿಮ್ಮ ಶ್ರಮ ಹಾಗೂ ನಿಷ್ಠೆಯ ಫಲವಾಗಿ ಉತ್ತಮ ಆದಾಯ ಹೊಂದುವಿರಿ. ಆದರೆ ಖರ್ಚು, ವೆಚ್ಚಗಳ ಮೇಲೆ ನಿಗಾ ಇಡುವುದು ಒಳ್ಳೆಯದು. ಅತಿಥಿಗಳ ಆಗಮನ ಆಗಾಗ ಖರ್ಚಿಗೆ ದಾರಿ.

ವೃಷಭ (Vrushabh)


ಮನುಷ್ಯನಿಗೆ ಆತ್ಮವಿಶ್ವಾಸ ಅತಿ ಮುಖ್ಯ. ಆದರೆ ಅತಿಯಾದ ಆತ್ಮವಿಶ್ವಾಸ ಕಾರ್ಯಹಾನಿಗೆ ಕಾರಣವಾದೀತು. ಹಾಗೆಂದ ಮಾತ್ರಕ್ಕೆ ಧೃತಿಗೆಡುವ ಅವಶ್ಯಕತೆ ಇಲ್ಲ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿಗೆ ಅಡೆತಡೆ, ಅಪವಾದ ಭೀತಿ ಕಂಡು ಬರಲಿದೆ. ತಾತ್ಕಾಲಿಕವಾಗಿ ಆರ್ಥಿಕ ಅಡಚಣೆಗಳಿದ್ದರೂ ಅನಿರೀಕ್ಷಿತ ರೂಪದಲ್ಲಿ ಧನಾಗಮನ ಇದ್ದೇ ಇರುವುದು. ದಿನಾಂತ್ಯ ಶುಭವಿದೆ.

ಮಿಥುನ (Mithuna)


ಹಿರಿಯರ ಆಶೀರ್ವಾದ ದೊರೆಯುವುದು. ಉದರ ಶೂಲೆಗೆ ಸಂಬಂಧಪಟ್ಟ ತೊಂದರೆಗಳು ಕಾಣಿಸಿಕೊಳ್ಳುವವು.ದೇವತಾನುಗ್ರಹಕ್ಕಾಗಿ ದೂರ ಸಂಚಾರ ಭಾಗ್ಯವಿದೆ. ದಾಯಾದಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ನವ ದಂಪತಿಗಳಿಗೆ ಅನಿರೀಕ್ಷಿತ ರೂಪದಲ್ಲಿ ಸಂತಾನಭಾಗ್ಯ ತೋರಿ ಬಂದೀತು. ಆಗಾಗ ಸಂಚಾರವಿದೆ.

ಕರ್ಕ (Karka)


ಆರ್ಥಿಕವಾಗಿ ಲಾಭಕರವಾದ ವಾತಾವರಣವಿದ್ದರೂ ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ದಾಂಪತ್ಯದಲ್ಲಿ ಸಹನೆ ಇರಲಿ. ಮಕ್ಕಳಿಂದ ಖರ್ಚು ಬಂದೀತು. ವಾಹನ ಖರೀದಿಗೆ ಕಷ್ಟವಾದರೂ ಸಾಧ್ಯತೆ ಇದೆ.

ಸಿಂಹ (Simha)


ಮನೆಯಲ್ಲಿ ತುಂಬಾ ಕಿರಿಕಿರಿ ಇರುವುದು. ಅಸೌಖ್ಯದಿಂದ ಆಸ್ಪತ್ರೆಯ ದರ್ಶನಯೋಗ ಇರುವುದು. ಆದರೂ ದೈವಾನುಗ್ರಹ ವಿರುವುದರಿಂದ ಮನಸ್ಸಿನ ಶಾಂತಿ ಕಾಪಾಡಿಕೊಳ್ಳಿರಿ.

ಕನ್ಯಾರಾಶಿ (Kanya)


ಮಾನಸಿಕವಾಗಿ ಕಿರಿಕಿರಿ ಅನುಭವಕ್ಕೆ ಬರುವುದು. ಲಾಭಸ್ಥಾನದ ಕುಜನು ಮುನ್ನಡೆಗೆ ಸಾಧಕನಾದಾನು. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಸಾರ್ಥಕ್ಯವನ್ನು ಪಡೆದಾರು. ಸದುಪಯೋಗಿಸಿ.

ತುಲಾ (Tula)


ವೃತ್ತಿರಂಗದಲ್ಲಿ ಹೊಂದಾಣಿಕೆಯಿಂದ ಮುಂದುವರಿಯಿರಿ. ಹಂತ ಹಂತವಾಗಿ ಅಭಿವೃದ್ಧಿ ಗೋಚರಕ್ಕೆ ಬರುವುದರಿಂದ ದೃಢ‌ ನಿರ್ಧಾರದಿಂದ ಮುಂದುವರಿಯಿರಿ. ದಿನಾಂತ್ಯ ಶುಭ.

ವೃಶ್ಚಿಕ (Vrushchika)


ದೇವತಾನುಗ್ರಹ ಪರಿಪೂರ್ಣ ಇರುವುದರಿಂದ ಯಾವುದೇ ಕಷ್ಟನಷ್ಟವನ್ನು ಮೆಟ್ಟಿ ಮುಂದುವರಿಯಬಹುದು. ನಿರುದ್ಯೋಗಿಗಳು ಉದ್ಯೋಗ ಸಂಪನ್ನರಾದಾರು. ಸಂಚಾರದಲ್ಲಿ ಕಾರ್ಯಸಿದ್ಧಿ.

ಧನು ರಾಶಿ (Dhanu)


ಸಂಚಾರದಲ್ಲಿ ಅಭಿವೃದ್ಧಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶದ ಉದ್ಯಮ ಲಾಭ. ಆರ್ಥಿಕವಾಗಿ ಉನ್ನತಿ. ಸಾಂಸಾರಿಕವಾಗಿ ನೆಮ್ಮದಿ ಗೋಚರಕ್ಕೆ ಬರಲಿದೆ. ದಿನಾಂತ್ಯ ಕಿರು ಸಂಚಾರ ಯೋಗವಿದೆ.

ಮಕರ (Makara)


ನಿರೀಕ್ಷಿತ ಕೆಲಸ ಸಾಧನೆಗಳು ನೆರವೇರಲಿವೆ. ದೇವತಾ ದರ್ಶನ ಭಾಗ್ಯಕ್ಕಾಗಿ ಸಂಚಾರವಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಸಾಂಸಾರಿಕ ಜೀವನವು ಅತ್ಯಂತ ಸುಖಮಯವಾಗಲಿದೆ.

ಕುಂಭರಾಶಿ (Kumbha)


ಆಗಾಗ ಮಾನಸಿಕ ಭೀತಿ ಅಡಚಣೆಗಳು ತೋರಿ ಬಂದಾವು. ದೇಹಾರೋಗ್ಯದ ಬಗ್ಗೆ ಗಮನ ಹರಿಸಿರಿ. ಸಾಂಸಾರಿಕ ಜೀವನ ಉತ್ತಮ ಇರುವುದು. ವಿದ್ಯಾರ್ಥಿಗಳು ಚೇತರಿಕೆಯನ್ನು ಪಡೆಯಲಿದ್ದಾರೆ.

ಮೀನರಾಶಿ (Meena)


ವಿದ್ಯಾರ್ಥಿಗಳಿಗೆ ಉತ್ತಮ ವಿದೇಶ ಸಂಚಾರದ ಯೋಗ ಇರುವುದರಿಂದ ಅಭ್ಯಾಸದ ಬಗ್ಗೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top