fbpx
ಸಮಾಚಾರ

ಲಾಕ್‌ಡೌನ್‌ನಿಂದ ಕಂಗಾಲಾಗಿದ್ದ ಜನಕ್ಕೆ ಅಮೇಜಾನ್‌ ಆಫರ್; 50ಸಾವಿರ ಉದ್ಯೋಗವಕಾಶ!

ಕೋವಿಡ್ 19 ವೈರಸ್ ಕಾರಣ ಬಹುತೇಕ ಎಲ್ಲಾ ಕಂಪನಿಗಳು ನಷ್ಟದಲ್ಲಿದೆ. ಹೀಗಾಗಿ ವೇತನ ಕಡಿತ, ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕೋಟ್ಯಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಉದ್ಯೋಗದ ಆತಂಕದಲ್ಲಿ ಜನ ದಿನ ಮುಂದೂಡುತ್ತಿರುವಾಗ ಅಮೇಜಾನ್ 50,000 ಮಂದಿಯನ್ನು ತಾತ್ಕಾಲಿಕ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ತನ್ನ ಸೇವೆಗಳನ್ನು ಅವಲಂಬಿಸಿರುವ ಜನರ ಬೇಡಿಕೆ ಪೂರೈಸುವ ಸಲುವಾಗಿ ವಿಶೇಷವಾಗಿ ಸಾರ್ವಜನಿಕ ಸೇವೆಯಿಂದ ಹೊರಗುಳಿದಿರುವವರಿಗಾಗಿ ಸುಮಾರು 50 ಸಾವಿರ ಕಾಲೋಚಿತ ಉದ್ಯೋಗವಕಾಶಗಳನ್ನು ಸೃಷ್ಠಿಸುವುದಾಗಿ ಅಮೆಜಾನ್ ಇಂಡಿಯಾ ಶುಕ್ರವಾರ ಹೇಳಿದೆ. ತಾತ್ಕಾಲಿಕ ಕೆಲಸಕ್ಕೆ ನೇಮಕ ನಡೆಯಲಿದೆ. ಡಿಲೆವರಿ, ಆಫೀಸ್, ಸ್ಟಾಕ್, ಸೇರಿದಂತೆ ಹಲವು ವಿಭಾಗಗಳಿಗೆ ನೇಮಕ ನಡೆಯಲಿದೆ.

ಅಮೆಜಾನ್ ನಡಿ ಸ್ವತಂತ್ರ ಗುತ್ತಿಗೆದಾರರಾಗಿ ಪಾರ್ಟ್ ಟೈಮ್ ಕೆಲಸ ಸೇರಿದಂತೆ ಡೆಲಿವರಿ ನೆಟ್ ವರ್ಕ್ ಹಾಗೂ ಅವರ ಅವಲಂಬಿತ ಕೇಂದ್ರಗಳಲ್ಲಿ ಇದು ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಲಿದೆ ಎಂದು ಹೇಳಿಕೆಯಲ್ಲಿ ಅಮೆಜಾನ್ ಇಂಡಿಯಾ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top