fbpx
ಸಮಾಚಾರ

ಎಣ್ಣೆ ತಂದುಕೊಡಿ ಎಂದವನಿಗೆ ನಟ ಸೋನು ಸೂದ್​ ಹೇಳಿದ್ದೇನು ಗೊತ್ತಾ?

ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಪಾಲಿಗೆ ನಟ ಸೋನು ಸೂದ್ ಹೀರೋ ಆಗಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಉಳಿದುಕೊಳ್ಳಲು ತಮ್ಮ ಐಶಾರಾಮಿ ಹೋಟೆಲ್ ಬಿಟ್ಟುಕೊಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಮುಂಬೈನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡುವ ಮೂಲಕ ಮನೆಗಳಿಗೆ ಮರಳಲು ಸಹಾಯ ಮಾಡಿದ್ದಾರೆ.

 

 

ಸೋನು ಸೂದ್ ಅವರ ಕಾರ್ಯಕ್ಕೆ ಪ್ರಶಂಸೆಗಳು ಹರಿದು ಬಂದಿವೆ. ನೆಟ್ಟಿಗರು ಸೋನು ಸೂದ್ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಈ ಮದ್ಯೆ ಕೊನೆಯ ಕಾರ್ಮಿಕ ತನ್ನ ಮನೆಯನ್ನು ಸೇರುವವರೆಗೂ ತಮ್ಮ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದಿರುವ ಸೋನು ಸೂದ್​ ಸಾಮಾಜಿಕ ಜಾಲತಾಣದಲ್ಲಿ ಖುದ್ದು ತಾವೇ, ಕಾರ್ಮಿಕರು ಎಲ್ಲೆಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹುಡುಕುತ್ತಿದ್ದಾರೆ. ವಲಸೆ ಕಾರ್ಮಿಕರ ನಂಬರ್​ಗಳನ್ನು ಪಡೆದುಕೊಂಡು ಸೋನು ಸೂದ್​ ಬಸ್​ ವ್ಯವಸ್ಥೆ ಮಾಡುತ್ತಿದ್ದಾರೆ.

ಈ ನಡುವೆ ನೆಟ್ಟಿಗನೊಬ್ಬ ಟ್ವಿಟ್ಟರ್ ನಲ್ಲಿ ಎಣ್ಣೆ ಕೊಂಡುಕೊಳ್ಳಲು ಸಹಾಯ ಮಾಡಿ ಎಂದು ಟ್ವೀಟ್ ಮಾಡಿ ನಟ ಸೋನು ಸೂದ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಬುಲ್ಲಾ ಭಾಯಿ ಎನ್ನುವ ಟ್ವಿಟ್ಟರ್​ ಅಕೌಂಟ್​ನಲ್ಲಿ ವ್ಯಕ್ತಿಯೊಬ್ಬ ನಾನು ಮನೆಯಲ್ಲಿ ಸಿಲುಕಿಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಲಿಕ್ಕರ್​ ಶಾಪ್​ಗೆ ಕರೆದೊಯ್ಯಿರಿ ಅಂತ ಹಿಂದಿಯಲ್ಲಿ ಬರೆದು ಮನವಿ ಮಾಡಿಕೊಂಡಿದ್ದಾರೆ.

ಇದಕ್ಕೆ ಹಿಂದಿಯಲ್ಲಿಯೇ ಉತ್ತರ ನೀಡಿರುವ ಸೋನು ಸೂದ್ ಅವರು ” ನಿನ್ನನ್ನು ಲಿಕ್ಕರ್ ಶಾಪ್​ನಿಂದ ಮನೆಗೆ ಕರೆತರಲು ಬೇಕಿದ್ದರೆ ನಾನು ಸಹಾಯ ಮಾಡುತ್ತೇನೆ. ಅವಶ್ಯಕತೆ ಬಿದ್ದಾಗ ನನಗೆ ಹೇಳು” ಎಂದು ರಿಪ್ಲೆ ಮಾಡಿದ್ದಾರೆ. ಈ ಮೂಲಕ ಎಣ್ಣೆ ತರಲು ಸಹಾಯ ಮಾಡಿ ಎಂದವನ ಕಾಲೆಳೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top