fbpx
ಸಮಾಚಾರ

ವಿಜ್ಞಾನಿಗಳಿಗೆ ಸವಾಲಾಗಿದ್ದ; ಆಹಾರ, ನೀರಿಲ್ಲದೆ 76 ವರ್ಷ ಜೀವಿಸಿದ್ದ ಯೋಗಿ ನಿಧನ

76 ವರ್ಷಗಳಿಂದ ಆಹಾರ ಹಾಗೂ ನೀರಿಲ್ಲದೆ ಜೀವಿಸಿದ ಪ್ರಹ್ಲಾದ್ ಜಾನಿ ಅಲಿಯಾಸ್ ಚುನರೀವಾಲಾ ಮಾತಾಜಿ ಗುಜರಾತ್‍ನ ಗಾಂಧೀನಗರ ಜಿಲ್ಲೆ ಸ್ವಗ್ರಾಮ ಗ್ರಾಮ ಚರದಾದಲ್ಲಿ ನಿಧನರಾಗಿದ್ದಾರೆ.

ಪ್ರಹ್ಲಾದ್ ಜಾನಿಯವರಿಗೆ ಗುಜರಾತಿನಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ.ಆಹಾರ ಅಥವಾ ನೀರು ಇಲ್ಲದೆ ಬದುಕುತ್ತಿರುವುದು ಹೇಗೆ ಎಂಬುದರ ಬಗ್ಗೆ 2003 ಮತ್ತು 2010ರಲ್ಲಿ ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದರು. ತನಗೆ ದೈವ ಬಲ ಇರುವ ಕಾರಣ ಅನ್ನ ಅಥವಾ ನೀರು ಯಾವುದೂ ಬೇಡ ಎಂದು ಪ್ರಹ್ಲಾದ್ ಜಾನಿ ಹೇಳಿದ್ದರು. ಅವರನ್ನು ವಿಜ್ಞಾನಿಗಳು 2003ರಿಂದ 2010ರವರೆಗೂ ಪರೀಕ್ಷಿಸಿದ್ದರು.

ದೇವಿ ಅಂಬಾಬಾಯಿಯಾ ಮೇಲೆ ತುಂಬಾ ಭಕ್ತಿ ಹೊಂದಿದ್ದ ಜಾನಿ, ಎಲ್ಲಾ ಸಮಯದಲ್ಲಿ ಚುನರಿ(ಕೆಂಪು ಸೀರೆ) ಧರಿಸಿ ಮಹಿಳೆಯರಂತೆ ಬಧುಕುತ್ತಿದ್ದರು. ಇದಕ್ಕಾಗಿ ಅವರನ್ನು ಚುನರಿವಾಲಾ ಮಾತಾಜಿ ಎಂದೂ ಕೂಡ ಸಂಬೋಧಿಸಲಾಗುತಿತ್ತು. ಅನ್ನ ನೀರಿಲ್ಲದೆ 76 ವರ್ಷ ಕಳೆದಿರುವುದಾಗಿ ಅವರು ಹೇಳಿಕೊಂಡಿದ್ದರು. ಆಧ್ಯಾತ್ಮಿಕ ಅನುಭೂತಿಯ ಹುಡುಕಾಟದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮನೆಯನ್ನು ತ್ಯಜಿಸಿ, 14ನೇ ವಯಸ್ಸಿನಿಂದಲೇ ಜಾನಿ ಆಹಾರ ಮತ್ತು ನೀರು ಕೂಡ ತ್ಯಜಿಸಿದ್ದರು ಎಂದು ಅವರ ಅನುಯಾಯಿಗಳು ಹೇಳುತ್ತಾರೆ.

2010ರಲ್ಲಿ ಡಿಫೆನ್ಸ್ ರಿಸರ್ಜ್ ಆ್ಯಂಡ್ ಡೆವೆಲಪ್‌ಮೆಂಟ್ ಆರ್ಗನೈಸೇಷನ್ ನೇತೃತ್ವದಲ್ಲಿ ಡಿಐಪಿಎಸ್‌ನ ವಿಜ್ಞಾನಿಗಳು ಮತ್ತು ವೈದ್ಯರು 15 ದಿನಗಳ ಕಾಲ ಜಾನಿ ಅವರ ಮೇಲೆ ನಿಗಾ ಇರಿಸಿ ಅಧ್ಯಯನ ನಡೆಸಿದ್ದರು. ಜಾನಿ ಅವರ ದೇಹದಲ್ಲಿ ಹಸಿವು ಮತ್ತು ದಾಹ ಆಗದಂತಿರುವ ಕೆಲವು ವ್ಯವಸ್ಥೆ ಇದೆ ಎಂದು ಡಿಐಪಿಎಎಸ್ ತಜ್ಞರು ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top