fbpx
ಸಮಾಚಾರ

“ವೈದ್ಯರು ದುಡ್ಡಿಗಾಗಿ ಸುಳ್ಳು ಹೇಳುತ್ತಿದ್ದಾರೆ; ಈಗ ಬಂದಿರೋದು ಕೊರೋನಾ ವೈರಸ್ ಅಲ್ಲ, ಅದು ಸಪ್ತಮಾತೃಕೆ ಕೌಮಾರಿ” ಬ್ರಹ್ಮಾಂಡ ಗುರೂಜಿ

ತಮ್ಮ ವಿಶಿಷ್ಟ ಮಾತಿನ ಧಾಟಿಯಿಂದಲೇ ಗುರುತಿಸಿಕೊಂಡಿರುವ, ಸಮಾನ ಪ್ರಮಾಣದಲ್ಲಿ ಖ್ಯಾತಿ ಮತ್ತು ಕುಖ್ಯಾತಿಯನ್ನು ಪಡೆದಿರುವ ಬ್ರಹ್ಮಾಂಡ ಗುರೂಜಿ ಅಲಿಯಾಸ್ ನರೇಂದ್ರ ಬಾಬು ಶರ್ಮಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. ಈಗ ಬಂದಿರೋ ಕೊರೊನಾ ಒಂದು ವೈರಸ್ ಅಲ್ಲ. ಅದು ಹಿಂದೆ ಪ್ಲೇಗಮ್ಮನ ರೂಪದಲ್ಲಿ ಬಂದಿದ್ದ ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಕೌಮಾರಿ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ಹೇಳಿಕೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದಶರಥರಾಮೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ನರೇಂದ್ರ ಶರ್ಮಾ, ಧಶರಥ ರಾಮೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈಗ ಬಂದಿರೋದು ಕೊರೋನಾ ವೈರಸ್ ಅಲ್ಲ, ಅದು ಸಪ್ತಮಾತೃಕೆ ಕೌಮಾರಿ. ಈ ಕೌಮಾರಿಯ ಶಾಂತಿಗಾಗಿ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಬೇಕಿದೆ ಎಂದು ಹೇಳಿದ್ದಾರೆ.

ಪ್ರಪಂಚದಲ್ಲೆಡೆ ಕೊರೊನಾ ರೂಪದಲ್ಲಿ ಬಂದಿರೋದು ವೈರಸ್ ಅಲ್ಲ. ಅದು ಕೌಮಾರಿ… ಈ ಕೌಮಾರಿ ಶಾಂತವಾಗಬೇಕಾದರೆ ಎಲ್ಲಾ ದೇವಾಲಯಗಳಲ್ಲಿ ನಿರಂತರವಾಗಿ ವಿಶೇಷ ಪೂಜೆಗಳು ನಡೆಯಬೇಕು. ಡಾಕ್ಟರ್​ಗಳು ಇದನ್ನ ಕೊರೊನಾ ವೈರಸ್ ಎಂದು ಸುಳ್ಳು ಹೇಳುತ್ತಿದ್ದಾರೆ. ವೈದ್ಯರುಗಳ ಮಾಫಿಯಾದಿಂದ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ದುಡ್ಡು ತಿನ್ನಲು ವೈದ್ಯರು ಮಾಡಿರುವ ಸಂಚು ಎಂದು ಕೊರೊನಾ ವಾರಿಯರ್ಸ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top