fbpx
ಸಮಾಚಾರ

ಬಿಜೆಪಿ ಅತೃಪ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರ ಪಟ್ಟಿ ಬಹಿರಂಗ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಕೆಲ ಬಿಜೆಪಿ ಶಾಸಕರು ಬಂಡಾಯವೆದ್ದಿದ್ದು, ರಹಸ್ಯವಾಗಿ ಸಭೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಜೆಪಿಯ 20 ಕ್ಕೂ ಹೆಚ್ಚು ಮಂದಿ ಬಿಜೆಪಿ ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿದ್ದು ಸಿಎಂ ಯಡಿಯೂರಪ್ಪ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಯಾರ್ಯಾರು ಅತೃಪ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ

ಕಲ್ಯಾಣ ಕರ್ನಾಟಕ ಅಥವಾ ಹೈದರಾಬಾದ್-ಕರ್ನಾಟಕ ಭಾಗದ ಬಹುತೇಕ ಅತೃಪ್ತ ಬಿಜೆಪಿ ಶಾಸಕರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಚಿವ ಸ್ಥಾನ ಸಿಗದೆ ಹತಾಶೆಯಲ್ಲಿರುವ ಆ ಭಾಗದ ಬಿಜೆಪಿ ಶಾಸಕರೇ ಇದರಲ್ಲಿದ್ದರು. ಆದರೆ, ಸಭೆ ನಡೆದದ್ದು ನಿಜವಾದರೂ ಇದು ಬಂಡಾಯದ ಬಾವುಟ ಹಾರಿಸುವ ಸಭೆಯಾಗಿರಲಿಲ್ಲ ಎಂದು ಆ ಶಾಸಕರು ಹೇಳುತ್ತಿದ್ದಾರೆ.

ಸಭೆಯಲ್ಲಿದ್ದ ಶಾಸಕರು ಪಟ್ಟಿ ಇಂತಿದೆ:
* ಉಮೇಶ್ ಕತ್ತಿ
* ವಿಜಯಪುರ ನಗರ ಶಾಸಕ- ಬಸನಗೌಡ ಪಾಟೀಲ್ ಯತ್ನಾಳ್
* ಅರವಿಬಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ
* ಸುರಪುರ ಶಾಸಕ ರಾಜುಗೌಡ ಕಾಗೆ

* ಸಿರಗುಪ್ಪ ಶಾಸಕ ಸೋಮಲಿಂಗಪ್ಪ
* ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರು
* ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಮಡು
* ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ

* ಹೊಸದುರ್ಗಾ ಶಾಸಕ ಗೂಳಿಹಟ್ಟಿ ಶೇಖರ್
* ತೇರದಾಳ ಶಾಸಕ ಸಿದ್ದು ಸವದಿ
* ರಾಮದುರ್ಗಾ ಶಾಸಕ ಮಹದೇವಪ್ಪ ಯಾದವಾಡ

* ರಾಯಚೂರು ನಗರ ಕ್ಷೇತ್ರದ ಶಾಸಕ ಶಿವರಾಜ ಪಾಟೀಲ್
* ಸೇಡಂ ಶಾಸಕ ರಾಜಕುಮಾರ್ ಪಾಟೀಲ್
* ಅಳಂದ ಶಾಸಕ ಸುಭಾಷ್ ಗುತ್ತೇದಾರ್,, ಸೇರಿದಂತೆ ಇನ್ನೂ ಹಲವಾರು ಶಾಸಕರು ಉಮೇಶ್ ಕತ್ತಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು.

ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಭೆ ಸೇರಿದ್ದ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಸರಕಾರದ ಕಾರ್ಯವೈಖರಿ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಭಾಗವಹಿಸಿದ್ದ ಹಲವು ಶಾಸಕರು ಸಿಎಂ ಕಾರ್ಯವೈಖರಿಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top