ಹಂತ ಹಂತವಾಗಿ ಲಾಕ್’ಡೌನ್ ತೆರವಾಗುತ್ತಲೇ, ದೇಶದಲ್ಲಿ ಹೊಸ ಕೊರೋನಾ ಸೋಂಕಿತರ ಸಂಖ್ಯೆಯೂ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದಾಖಲೆಯ 7,466 ಮಂದಿಯಲ್ಲಿ ಪಾಸಿಟಿವ್ ಬಂದಿದ್ದು, 175ಮಂದಿ ಮೃತಪಟ್ಟಿದ್ದಾರೆ.
#IndiaFightsCorona: #ಕೋವಿಡ್19: 29-05-2020 #CovidInIndia
ಒಟ್ಟು ಪ್ರಕರಣ:165,799
ಸಕ್ರಿಯ ಪ್ರಕರಣಗಳು: 89,987
ಮೃತಪಟ್ಟವರು: 4,706
ಗುಣಮುಖರಾದವರು/ಹೊರಹೋಗಿರುವ ಪ್ರಕರಣ :71,106
#CoronaVirusUpdates pic.twitter.com/XLSsxUhSNi— DD Chandana News (@DDChandanaNews) May 29, 2020
ಇಂದಿನ ವರದಿಯಲ್ಲಿ ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 7,466 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 175 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೂ ಕೊರೊನಾ ಪೀಡಿತರ ಸಂಖ್ಯೆ 1,65,799ಕ್ಕೆ ಏರಿಕೆಯಾದರೆ 89,987 ಸಕ್ರಿಯ ಪ್ರಕರಣ ಹಾಗೂ 71,105 ಮಂದಿ ಕೊರೊನಾ ಗುಣಮುಖ ಹೊಂದಿದ್ದಾರೆ. ಈವರೆಗೂ ದೇಶದಲ್ಲಿ 4,706 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.
ಇದರಿಂದ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 1,65,799ಕ್ಕೆ ಏರಿಕೆಯಾಗಿದೆ. ಜೊತೆಗೆ ಭಾರತವು ಜಾಗತಿಕವಾಗಿ ಅತಿಹೆಚ್ಚು ಕೊರೋನಾ ಪೀಡಿತರಿರುವ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಏರಿದೆ. 10ನೇ ಸ್ಥಾನದಲ್ಲಿರುವ ಟರ್ಕಿಯ ಕೊರೋನಾ ಪೀಡಿತರ ಸಂಖ್ಯೆ 1,60,979. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಬ್ರಿಜಿಲ್ ಮತ್ತು ರಷ್ಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. 10ನೇ ಸ್ಥಾನದಲ್ಲಿದ್ದ ಭಾರತ ಟರ್ಕಿಯನ್ನು ಹಿಂದೂಡಿ ಈಗ 9ನೇ ಸ್ಥಾನಕ್ಕೆ ಬಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
