fbpx
ಸಮಾಚಾರ

ವಲಸೆ ಕಾರ್ಮಿಕರಿಗಾಗಿ ಸಹಾಯವಾಣಿ ಪ್ರಾರಂಭಿಸಿ ಮತ್ತೊಮ್ಮೆ ಹೃದಯ ವೈಶಾಲ್ಯತೆ ಮೆರೆದ ನಟ ಸೋನು ಸೂದ್‌

ಮಾನವೀಯತೆ ಮೆರೆಯುತ್ತಿರುವ ಬಾಲಿವುಡ್ ನಟ ಸೋನು ಸೂದ್ ಅವರು, ಈಗ ಅವರ ಸಹಾಯಕ್ಕಾಗಿ ಟೋಲ್ ಫ್ರೀ ನಂಬರ್ ಆರಂಭಿಸಿರುವುದಾಗಿ ಹೇಳಿದ್ದಾರೆ. ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ಅಥವಾ ರೈಲು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರು 18001213711 ಸಹಾಯವಾಣಿ ಮೂಲಕ ಸೋನು ಸೂದ್ ಅವರ ತಂಡವನ್ನು ಸಂಪರ್ಕಿಸಬಹುದು.

“ನನಗೆ ತುಂಬಾ ಫೋನ್ ಕರೆಗಳು ಬರುತ್ತಿದ್ದವು…ದಿನಕ್ಕೆ ಸಾವಿರಾರು ಕರೆಗಳು. ನನ್ನ ಕುಟುಂಬದವರು ಮತ್ತು ಗೆಳೆಯರು ಡಾಟಾ ಸಂಗ್ರಹಣೆಯಲ್ಲಿ ನಿರತರಾಗಿದ್ದರು. ಹೀಗೆ ಮುಂದುವರೆದರೆ ಸಹಾಯ ಬೇಕಾದವರೆಲ್ಲರೂ ನಮ್ಮನ್ನು ಸಂಪರ್ಕಿಸಲಾಗುವುದಿಲ್ಲ ಎಂಬುದನ್ನು ಅರಿತೆವು. ಹಾಗಾಗಿ ಕಾಲ್‌ ಸೆಂಟರ್‌ ಶುರುಮಾಡಲು ನಿರ್ಧರಿಸಿದೆವು, ಇದೊಂದು (18001213711 ) ಉಚಿತ ಸಹಾಯವಾಣಿ ಸಂಖ್ಯೆಯಾಗಿದೆ,” ಎಂದು ಹೇಳಿದ್ದಾರೆ ನಟ ಸೋನು.

ವಲಸೆ ಕಾರ್ಮಿಕರಿಗೆ ಸೋನು ಸೂದ್ ಸಹಾಯ:
ಅಂದಹಾಗೆ ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಪಾಲಿಗೆ ನಟ ಸೋನು ಸೂದ್ ಹೀರೋ ಆಗಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಉಳಿದುಕೊಳ್ಳಲು ತಮ್ಮ ಐಶಾರಾಮಿ ಹೋಟೆಲ್ ಬಿಟ್ಟುಕೊಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಮುಂಬೈನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡುವ ಮೂಲಕ ಮನೆಗಳಿಗೆ ಮರಳಲು ಸಹಾಯ ಮಾಡಿದ್ದಾರೆ.

ಸೋನು ಸೂದ್ ಅವರ ಕಾರ್ಯಕ್ಕೆ ಪ್ರಶಂಸೆಗಳು ಹರಿದು ಬಂದಿವೆ. ನೆಟ್ಟಿಗರು ಸೋನು ಸೂದ್ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಈ ಮದ್ಯೆ ಕೊನೆಯ ಕಾರ್ಮಿಕ ತನ್ನ ಮನೆಯನ್ನು ಸೇರುವವರೆಗೂ ತಮ್ಮ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದಿರುವ ಸೋನು ಸೂದ್​ ಸಾಮಾಜಿಕ ಜಾಲತಾಣದಲ್ಲಿ ಖುದ್ದು ತಾವೇ, ಕಾರ್ಮಿಕರು ಎಲ್ಲೆಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹುಡುಕುತ್ತಿದ್ದಾರೆ. ವಲಸೆ ಕಾರ್ಮಿಕರ ನಂಬರ್​ಗಳನ್ನು ಪಡೆದುಕೊಂಡು ಸೋನು ಸೂದ್​ ಬಸ್​ ವ್ಯವಸ್ಥೆ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top