fbpx
ಸಮಾಚಾರ

ಇಂಡಿಯಾ ಪದವನ್ನು ‘ಭಾರತ’ ಅಥವಾ ‘ಹಿಂದೂಸ್ಥಾನ್’ ಎಂದು ಬದಲಿಸಲು ಕೋರಿದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ಭಾರತೀಯ ಸಂವಿಧಾನವನ್ನು ತಿದ್ದುಪಡಿ ಮಾಡಿ “ಇಂಡಿಯಾ” ಎಂಬ ಹೆಸರನ್ನು “ಭಾರತ” ಅಥವಾ “ಹಿಂದೂಸ್ತಾನ್” ಎಂದು ಬದಲಾಯಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿರುವ ಮನವಿಯನ್ನು ಜೂನ್ 2 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಸಮ್ಮತಿಸಿದೆ.

ಭಾರತ ಅಥವಾ ಹಿಂದೂಸ್ತಾನ್​ ಎನ್ನುವುದು ನಮ್ಮ ರಾಷ್ಟ್ರೀಯತೆಯ ಪ್ರತೀಕ. ಇಂಡಿಯಾ ಎನ್ನುವುದು ಬ್ರಿಟಿಷರ ಸಾಮಂತತೆಯ ಸೂಚಕವಾಗಿದ್ದು, ಅದರಿಂದ ಹೊರಬರಬೇಕಿದೆ. ಈ ನಿಟ್ಟಿನಲ್ಲಿ ಆರ್ಟಿಕಲ್​ 1ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ದೆಹಲಿ ಮೂಲದ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ ಈ ಅರ್ಜಿ ಸುಪ್ರೀಂ ಕೋರ್ಟ್ ಮುಂದೆ ಬಂದಿದ್ದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಎ ಬೊಬ್ಡೆ ಲಭ್ಯವಿಲ್ಲದ ಕಾರಣ ಅದನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ನೋಟಿಸ್‌ನ ಪ್ರಕಾರ, ಈ ವಿಷಯವನ್ನು ಜೂನ್ 2 ರಂದು ಸಿಜೆಐ ನೇತೃತ್ವದ ನ್ಯಾಯಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top