fbpx
ಸಮಾಚಾರ

ಪಾದರಾಯನಪುರ JDS ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೊನಾ ಸೋಂಕು ದೃಢ

ಪಾದರಾಯನಪುರ ವಾರ್ಡ್’ನ ಜೆಡಿಎಸ್ ಪಕ್ಷದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾರಲ್ಲಿ ಶುಕ್ರವಾರ ಕೊರೋನಾ ವೈರಸ್ ಇರುವುದು ದೃಢಪಟ್ಟಿದ್ದು, ಇದೀಗ ಜೆಜೆ ನಗರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳಲ್ಲಿಯೂ ಕೊರೋನಾ ವೈರಸ್ ಭೀತಿ ಶುರುವಾಗಿದೆ.

ಕಂಟೈನ್‍ಮೆಂಟ್ ಝೋನ್‍ನಲ್ಲಿ ಓಡಾಡಿದ್ದ ಇಮ್ರಾನ್ ಪಾಷಾ ಅವರು ಶುಕ್ರವಾರ ಬೆಳ್ಳಗ್ಗೆ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಸಂಜೆ ಬಂದ ರಿಪೋರ್ಟ್ ನಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಾಗಿ ಇಮ್ರಾನ್ ಪಾಷ ಅವರ ಮನೆ ಇರುವ ಪಾದರಾಯನಪುರದ 13ನೇ ಕ್ರಾಸ್ ಅನ್ನು ಸೀಲ್‍ಡೌನ್ ಮಾಡಲಾಗಿದೆ.

ಇಮ್ರಾನ್ ಪಾಷಾಗೆ ಇರೋದು ಎರಡನೇ ಹಂತದ ಕೊರೊನಾವಾಗಿದೆ. ಅತಿಯಾದ ನೆಗಡಿ ಮತ್ತು ಕೆಮ್ಮು ಇದೆ. ಇದರಿಂದ ಕುಟುಂಬಸ್ಥರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಅಲ್ಲದೇ ಇಮ್ರಾನ್‍ಗೆ 8 ದಿನದ ಹಿಂದೆಯೇ ಉಸಿರಾಟದ ತೊಂದರೆ ಇತ್ತು. ಮೂರು ದಿನದ ಹಿಂದೆ ದಿನಸಿ ವಿತರಣೆ ಕೂಡ ಮಾಡಿದ್ದರು. ಹೀಗಾಗಿ ಇಮ್ರಾನ್ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ.

ಪಾಷಾ ಸಂಪರ್ಕದಲ್ಲಿದ್ದ ಅವರ ಪತ್ನಿ, ಇಬ್ಬರು ಮಕ್ಕಳು, ಕಾರು ಚಾಲಕ, ಮನೆ ಕೆಲಸದ ಸಿಬ್ಬಂದಿ, ಬೆಂಬಲಿಗರು ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಪಾದರಾಯನಪುರವನ್ನು ಸೀಲ್‌ಡೌನ್‌ ಮಾಡಿದ ಬಳಿಕವೂ ಪಾಷಾ ವಾರ್ಡ್‌ನ ಸೋಂಕಿತ ಪ್ರದೇಶದಲ್ಲಿ ಓಡಾಟ ನಡೆಸಿದ್ದರು. ಹೀಗಾಗಿ, ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top