fbpx
ಸಮಾಚಾರ

ಭಾರಿ ಸಿಡಿಲು ಬಡಿದು ವಿಶ್ವ ಪ್ರಸಿದ್ಧ ಪ್ರೇಮ ಸ್ಮಾರಕ ತಾಜ್‌ಮಹಲ್‌ಗೆ ಹಾನಿ.

ಗುಡುಗು ಸಹಿತ ಮಳೆಯಿಂದಾಗಿ ತಾಜ್ ಮಹಲ್ ಸಂಕೀರ್ಣದ ಮುಖ್ಯ ಭಾಗ ಮತ್ತು ಅದರ ಐದು ಎತ್ತರದ ಗುಮ್ಮಟಗಳ ಕೆಳಗಿರುವ ಕೆಲವು ಭಾಗಗಳನ್ನು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಸಿಡಿಲು ಹಾಗೂ ಭಾರೀ ಗಾಳಿಗೆ ಕಬ್ಬಿಣದ ಪೈಪ್‌ಗಳು ಉರುಳಿ ಬಿದ್ದಿರುವುದರಿಂದ ಸಣ್ಣದಾಗಿ ಮಾರ್ಬಲ್‌ಗಳು ಕಿತ್ತುಬಂದಿದ್ದು ಮತ್ತು ಯಮುನಾ ನದಿ ತಟದಲ್ಲಿರುವ ಕೆಂಪು ಮರಳುಕಲ್ಲುಗಳು ಮುರಿದಿವೆ.

ಕರೋನವೈರಸ್ ಲಾ ಡೌನ್ ಹಿನ್ನಲೆಯಲ್ಲಿ ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ಒಂದಾದ ದೇಶದ ಉನ್ನತ ಪ್ರವಾಸಿ ಆಕರ್ಷಣೆ ತಾಜ್ ಮಹಲ್ ನ್ನು ಮಾರ್ಚ್ ತಿಂಗಳಿಂದ ಮುಚ್ಚಲಾಗಿದೆ.”ಮೂಲ ರಚನೆಯ ಭಾಗವಾಗಿದ್ದ ಒಂದು ಮರಳುಗಲ್ಲಿನ ರೇಲಿಂಗ್ ಹಾನಿಯಾಗಿದೆ” ಎಂದು ಭಾರತದ ಪುರಾತತ್ವ ಸಮೀಕ್ಷೆಯ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ವಸಂತ್ ಕುಮಾರ್ ಸ್ವರ್ಣಕರ್ ಎಎಫ್‌ಪಿಗೆ ತಿಳಿಸಿದ್ದಾರೆ.

ಕಟ್ಟಡದ ಮುಖ್ಯಗೇಟ್ ಮತ್ತು ಎತ್ತರದ ಗುಮ್ಮಟದ ಕೆಳ ಭಾಗದ ಅಮೃತ ಶಿಲೆಯ ರೇಲಿಂಗ್‍ಗೆ ಹಾನಿಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮಾಧಿಯ ಮೇಲ್‍ಭಾಗಕ್ಕೆ ಹಾನಿಯಾಗಿದ್ದು, ತಾಜ್‍ಮಹಲ್ ಆವರಣದಲ್ಲಿದ್ದ ಕೆಲ ಮರಗಳು ಬುಡದ ಸಮೇತ ಕಿತ್ತು ಬಂದಿರುವುದಾಗಿ ಎಎಸ್‍ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಬಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಪುರಾತತ್ವ ಇಲಾಖೆಯ ಅಧಿಕಾರಿಗಳ ಪ್ರಕಾರ, ಕಬ್ಬಿಣದ ಪೈಪ್‌ಗಳನ್ನು ಸ್ವಚ್ಛತೆಗಾಗಿ ಬಳಸಲಾಗುತ್ತಿತ್ತು. ಆದರೆ, ಲಾಕ್‌ಡೌನ್‌ ಕಾರಣದಿಂದ ಕೆಲಸ ನಡೆದಿದ್ದಲ್ಲ ಎಂದಿದ್ದಾರೆ. ಇನ್ನು, ಭಾರೀ ಗಾಳಿಯಿಂದ ಮೇಲೆ ಇಟ್ಟಿದ್ದ ಕಬ್ಬಿಣದ ಪೈಪುಗಳು ಬಿದ್ದಿದ್ದರಿಂದ 9 ಅಡಿ ಉದ್ದದ ಮಾರ್ಬಲ್‌ ಮತ್ತು 6 ಅಡಿ ಉದ್ದದ ಕೆಂಪು ಮರಳುಗಲ್ಲಿನ ಎರಡು ಪ್ಯಾನೆಲ್‌ಗಳಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top