fbpx
ಸಮಾಚಾರ

“ಬಾಲ ಮುದುರಿಕೊಂಡಿದ್ದ ಬ್ರಹ್ಮಾಂಡ ಗುರೂಜಿ, ಮತ್ತೆ ಬಾಲ ಬಿಚ್ಚಲು ಶುರುಮಾಡಿದ್ದಾರೆ” ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗರಂ

ಇಂಥಾ ಆರೋಗ್ಯ ಪರಿಸ್ಥಿತಿಯಲ್ಲಿ ಮನಸೋಯಿಚ್ಚೆ ಭವಿಷ್ಯ ನುಡಿಯುತ್ತಾ ಜನರಲ್ಲಿ ಆತಂಕ ಸೃಷ್ಟಿಸುತ್ತಿರುವ ಬ್ರಹ್ಮಾಂಡ ಗುರುಗಳ ವಿರುದ್ಧ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಫುಲ್ ಗರಂ ಆಗಿದ್ದಾರೆ.

ತಮ್ಮ ವಿಶಿಷ್ಟ ಮಾತಿನ ಧಾಟಿಯಿಂದಲೇ ಗುರುತಿಸಿಕೊಂಡಿರುವ ಬ್ರಹ್ಮಾಂಡ ಗುರೂಜಿ ಅಲಿಯಾಸ್ ನರೇಂದ್ರ ಬಾಬು ಶರ್ಮಾ ಇತ್ತೀಚಿಗೆ ಈಗ ಬಂದಿರೋ ಕೊರೊನಾ ಒಂದು ವೈರಸ್ ಅಲ್ಲ. ಅದು ಹಿಂದೆ ಪ್ಲೇಗಮ್ಮನ ರೂಪದಲ್ಲಿ ಬಂದಿದ್ದ ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಕೌಮಾರಿ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಇಡೀ ಕೊಡಗು ಭೂಕಂಪದಿಂದ ನೆಲಸಮವಾಗಲಿದೆ ಎಂದಿದ್ದಾರೆ. ಭೂಕಂಪದಿಂದ ಇಡೀ ಅಮೆರಿಕ ಮತ್ತು ಆಸ್ಟ್ರೇಲಿಯಾ ಸಮುದ್ರದ ಪಾಲಾಗುತ್ತವೆ ಎಂದು ಕೂಡ ನರೇಂದ್ರ ಬಾಬು ಹೇಳಿದ್ದರು.

ಬ್ರಹ್ಮಾಂಡ ಭವಿಷ್ಯದ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು, “ಕೊಡಗು ಜಿಲ್ಲೆಯ ಬಗ್ಗೆ ಭವಿಷ್ಯ ನುಡಿಯುವ ಬ್ರಹ್ಮಾಂಡ ಗುರೂಜಿ, ಕೂರೊನಾ ಬಗ್ಗೆ ಯಾಕೆ ಭವಿಷ್ಯವನ್ನು ನುಡಿಯಲಿಲ್ಲ. ಈ ಬಗ್ಗೆಯೂ ಜನರಿಗೆ ಮುನ್ಸೂಚನೆಯನ್ನು ನೀಡಬಹುದಿತ್ತಲ್ಲವೇ”ಎಂದು ಪ್ರಶ್ನಿಸಿದ್ದಾರೆ.

‘ಕೊರೊನಾ ಕಾರಣಕ್ಕೆ ಮೂಲೆಗುಂಪಾಗಿದ್ದ ಮೌಢ್ಯಪ್ರಚಾರಕರು ಮತ್ತೆ ಬಾಲ ಬಿಚ್ಚುತ್ತಿದ್ದಾರೆ. ಜನರ ಮನೋದೌರ್ಬಲ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಗುರುಗಳು, ಬಾಬಾಗಳು, ಶಾಸ್ತ್ರಕಾರರು, ಪಂಚಾಂಗದವರು, ಹಸ್ತಸಾಮುದ್ರಿಕೆ ಹೇಳುವವರನ್ನು ಜನರು ದೂರ ಇಡಬೇಕು. ಇಂಥವರನ್ನು ಮೈಬಗ್ಗಿಸಿ ದುಡಿಯುವಂತೆ ಮಾಡುವ ಹೊಣೆಗಾರಿಕೆ ಜನರ ಮೇಲಿದೆ’ ಎಂದು ಹೇಳಿದ್ದಾರೆ.

ಅದಾವ ಮುಖ ಇಟ್ಟುಕೊಂಡು ಬ್ರಹ್ಮಾಂಡ ಗುರೂಜಿ ‘ಭಾರಿ ಭೂಕಂಪದಿಂದ ಕೊಡಗು ಜಿಲ್ಲೆ ನೆಲಸಮವಾಗಲಿದೆ’ ಎಂದು ಭವಿಷ್ಯ ನುಡಿದರೋ ಗೊತ್ತಿಲ್ಲ. ಇವರು ಹೇಳುವ ಭವಿಷ್ಯ ಸತ್ಯವಾಗುವುದಾದಲ್ಲಿ ಕಳೆದ ಎರಡು ವರ್ಷ ನೆರೆ ಹಾವಳಿ ವಿಚಾರವನ್ನು ಮೊದಲೇ ಏಕೆ ಹೇಳಲಿಲ್ಲ. ಜನರು ದಡ್ಡರಾದಾಗ ಇವರು ಬೇಳೆ ಬೇಯಿಸಿಕೊಳ್ಳುತ್ತಾರೆ.’ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top